ರೂ.94.11 ಕೋಟಿ ವ್ಯವಹಾರ 50.71ಲಕ್ಷ ಲಾಭ
ಗುರುವಾಯನಕೆರೆ ಇಲ್ಲಿನ ಸೇವಾ ಸಹಕಾರಿ ಸಂಘ ಗುರುವಾಯನಕೆರೆ ಇವರ 2019-20ನೇ ಸಾಲಿನ ಮಹಾಸಭೆಯು ಅಧ್ಯಕ್ಷ ಭಗೀರಥ ಜಿ ಇವರ ಅಧ್ಯಕ್ಷತೆಯಲ್ಲಿ ಡಿ.12 ರಂದು ಬ್ಯಾಂಕಿನ ಕಟ್ಟಡದಲ್ಲಿ ಜರಗಿತು.
ಸಂಘದ ಅಧ್ಯಕ್ಷರು ಎಲ್ಲಾ ಸದಸ್ಯರನ್ನು ಸ್ವಾಗತಿಸಿ 20 ವರ್ಷಗಳಿಂದ ನಿರಂತರ ಲೆಕ್ಕ ಪರಿಶೋಧನಾ ಇಲಾಖೆಯಿಂದ ಎ ದರ್ಜೆ ಹೊಂದಿ ಪ್ರತಿ ವರ್ಷ ಸದಸ್ಯರಿಗೆ ಲಾಭಾಂಶ ಹಂಚುತ್ತಿರುವ ಏಕೈಕ ಸಹಕಾರಿ ಸಂಘ ಎಂದು ತಿಳಿಸಿದರು.
ಸಂಘವು ವರದಿ ವರ್ಷದಲ್ಲಿ ರೂ 94.11 ಕೋಟಿ ವ್ಯವಹಾರ ನಡೆಸಿ ರೂ.50.70ಲಕ್ಷ ಲಾಭಗಳಿಸಿದೆ.ರೂ.95.13% ವಸೂಲಾತಿ 23 ಕೋಟಿ ಠೇವಣಾತಿ ರೂ.14.64 ಕೋಟಿ ಸಾಲ ನೀಡಿದೆ ಎಂದರು. ಸಂಘದ ಉಪಾಧ್ಯಕ್ಷೆ ಸುಜಿತಾ.ವಿ.ಬಂಗೇರ, ನಿರ್ದೇಶಕರಾದ ಸಚಿನ್ ಕುಮಾರ್, ವಡಿವೇಲು, ಶಾರದಾ, ಗೋಪಿನಾಥ್ ನಾಯಕ್, ಪುರಂದರ ಶೆಟ್ಟಿ, ರಾಮ, ಚಂದ್ರಕಾಂತ್, ಹರೀಶ್ಚಂದ್ರ, ಡಿಪಿಸಿ, ಪ್ರತಿನಿಧಿ ಸಿರಾಜುದ್ದಿನ್ ಉಪಸ್ಥಿತರಿದ್ದರು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತ್ರಾಜ್ ಜೈನ್ ವರದಿ ವಾಚಿಸಿ, ನಿರ್ದೇಶಕರಾದ ನಾರಾಯಣ ಭಟ್ ಮುಗುಳಿ ಧನ್ಯವಾದವಿತ್ತರು.
ಈ ಸಂದರ್ಭದಲ್ಲಿ ಅತಿ ಹೆಚ್ಚು ಪಿಗ್ಮಿ ಸಂಗ್ರಹಿಸಿದ ಪಿಗ್ಮಿ ಸಂಗ್ರಾಹಕ ಆನಂದ ಕೋಟ್ಯಾನ್ರವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಾದ ಸುದರ್ಶನ ಎಂ, ಪವನ್ ಪೂಜಾರಿ ತಲಾ 1 ಸಾವಿರ ದಂತೆ ಒಟ್ಟು 2 ಸಾವಿರ ಸಹಾಯಧನ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಸಹನಾ ಕಾಮತ್, ವಿವಿಕ್ತಾ, ಪಲ್ಲವಿ ಪೈ ಇವರಿಗೆ ತಲಾ 1500 ರಂತೆ ಒಟ್ಟು 4500 ರೂ ಸಹಾಯಧನ ಹಾಗೂ ಪದವಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ವೈಷ್ಣವಿ ಪೈ,ಕಾರ್ತಿಕ್ ನಾಯಕ್ ಇವರಿಗೆ ತಲಾ ರೂ 2 ಸಾವಿರದಂತೆ ಒಟ್ಟು 4 ಸಾವಿರದಂತೆ.ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಾದ ಫಿಯೊನಾ ರವರಿಗೆ ರೂ.2 ಸಾವಿರದಂತೆ ಸಹಾಯಧನ ವಿತರಿಸಲಾಯಿತು.