ಬೆಳಾಲು ಸಹಕಾರ ಸಂಘದ ಮಹಾಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ರೂ.56.26 ಲಕ್ಷ ನಿವ್ವಳ ಲಾಭ, ಶೇ.12 ಡಿವಿಡೆಂಟ್ ಘೋಷಣೆ

ಬೆಳಾಲು: ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬೆಳಾಲು ಇದರ 2019–20ನೇ ಸಾಲಿನ ವಾರ್ಷಿಕ ಮಹಾಸಭೆ ಡಿ.13 ರಂದು ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯಲ್ಲಿ ಸಂಘದ ಅಧ್ಯಕ್ಷ ಹೆಚ್ ಪದ್ಮ ಗೌಡರ ಅಧ್ಯಕ್ಷತೆಯಲ್ಲಿ ನಡೆಯಿತು.
ಅವರು ಮಾತನಾಡುತ್ತ ಆರ್ಥಿಕ ವರ್ಷದಲ್ಲಿ ಸಂಘವು ಉತ್ತಮ ಪ್ರಗತಿ ಸಾಧಿಸಿದೆ, ಈ ಪ್ರಗತಿಗೆ ಸಂಘದ ಸದಸ್ಯರು ಕಾರಣವಾಗಿದ್ದಾರೆ. ಮುಂದಕ್ಕೂ ಸಂಘದ ಅಭಿವೃದ್ಧಿಗಾಗಿ ಸಾಲಗಾರ ಸದಸ್ಯರು ಬಾಕಿ ಇರುವ ಸಾಲವನ್ನು ಸಕಾಲದಲ್ಲಿ ಪಾವತಿಸಿ ಸಹಕರಿಸಬೇಕು ಎಂದರು.
ಹೊಸ ಗೋದಾಮು ಕಟ್ಟಡ ಹಳೆಯ ಗೋದಾಮು ಕಟ್ಟಡವನ್ನು ತೆಗೆದು ರೂ.೨೬ಲಕ್ಷ ವೆಚ್ಚದ ಹೊಸ ಗೋದಾಮು ಕಟ್ಟಡ ನಿರ್ಮಾಣಕ್ಕೆ ಇಲಾಖೆಗೆ ಪ್ರಸ್ತಾವಣೆ ಕಳುಹಿಸಲಾಗಿದೆ ಮುಂದಿನ ವರ್ಷ ನಿರ್ಮಿಸಲಾಗುವುದು ಅಲ್ಲದೆ ಸಂಘದ ಹೆಸರಿಗೆ ಹಸ್ತಾಂತರವಾಗಿರುವ 13ಸೆಂಟ್ಸ್ ಜಾಗದಲ್ಲಿ ಮುಂದೆ ಹೊಸ ಯೋಜನೆ ಮಾಡಲಾಗುವುದು
ಹೆಚ್ ಪದ್ಮ ಗೌಡ ಅಧ್ಯಕ್ಷರು ಮಾತನಾಡಿ, ಸಂಘವು ಆರ್ಥಿಕ ವರ್ಷದಲ್ಲಿ ರೂ. 5626819 ನಿವ್ವಳ ಲಾಭಗಳಿಸಿದ್ದು ಅಡಿಟ್ ವರ್ಗಿಕರಣದ ಎ ತರಗತಿ ಹೊಂದಿದೆ. ಸದಸ್ಯರಿಗೆ ಶೇ.೧೨ ಡಿವಿಡೆಂಟ್ ಘೋಷಿಸಲಾಯಿತು.
ಬೆಳಾಲು ಒಂದೇ ಗ್ರಾಮಕ್ಕೆ ಸೀಮಿತವಾಗಿರುವ ಈ ಸಂಘದಲ್ಲಿ ಉತ್ತಮ ಪ್ರಗತಿಯಾಗಿದ್ದು ವರ್ಷಾಂತ್ಯದಲ್ಲಿ 1644 ಸದಸ್ಯರನ್ನು ಹೊಂದಿದೆ
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ದಿನೇಶ್ ಎ, ನಿರ್ದೇಶಕರುಗಳಾದ ಸುರೇಂದ್ರ ಗೌಡ, ವಿಜಯ ಗೌಡ, ದಾಮೋದರ ಗೌಡ, ರಾಜಪ್ಪ ಗೌಡ, ಸುಲೈಮಾನ್, ರಮೇಶ್ ಗೌಡ, ಎಲ್ಯಣ್ಣ ನಾಯ್ಕ, ಮಾನಿಗ, ಸೀತಮ್ಮ ಕೆ.ಎಂ. ಸುಜಾತ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಗೌಡ ವರದಿ ವಾಚಿಸಿ, ಲೆಕ್ಕಪತ್ರ ವಿವರ ನೀಡಿದರು. ಅಧ್ಯಕ್ಷ ಹೆಚ್ ಪದ್ಮಗೌಡ ಸ್ವಾಗತಿಸಿ, ಉಪಾಧ್ಯಕ್ಷ ದಿನೇಶ್ ಎ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.