ಹೊಸಪಟ್ಣ: ಬಜಿರೆ ಮುದ್ದಾಡಿ- ಹೊಸಪಟ್ಣ ರಸ್ತೆ ಬದಿ ಹುಲ್ಲು ಪೊದರು ಗಿಡಗಂಟಿಗಳು ಬೆಳೆದು ಪಾದಚಾರಿಗಳಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ ಇಲ್ಲಿನ ಶ್ರೀ ಸತ್ಯನಾರಾಯಣ ಬಜರಂಗದಳ ಶಾಖೆ ಮತ್ತು ಬಿಜೆಪಿಯ ಯುವ ಕಾರ್ಯಕರ್ತರು ಹಾಗೂ ಪರಿಸರದ ಸೇವಾ ಮನೋಭಾವದ ಯುವಕರು ಸತತವಾಗಿ ಮೂರನೇ ಭಾನುವಾರ ಶ್ರಮದಾನದ ಮೂಲಕ ಸ್ವಚ್ಚಗೊಳಿಸಿ, ಡಾಂಬರು ರಸ್ತೆಯಲ್ಲಿ ಅಲ್ಲಲ್ಲಿ ಬಿದ್ದ ಹೊಂಡಗಳನ್ನು ಮಣ್ಣು ಹಾಕಿ ಸರಿಪಡಿಸಲಾಯಿತು.
ಕಾಶಿ ಹೆಗ್ಡೆ ಮತ್ತು ವಿಜಯ, ಹೊಸಪಟ್ಣ ಇವರುಗಳು ಕಳೆ ಕೊಚ್ಚುವ ಯಂತ್ರವನ್ನು ಕೊಟ್ಟು ಸಹಕರಿಸಿದರು. ಜೆಸಿಬಿ ಯಂತ್ರದೊಂದಿಗೆ ಶ್ರಮದಾನದ ನೇತೃತ್ವವನ್ನು ಹರೀಣ್ ಸುವರ್ಣ, ಅಧ್ಯಕ್ಷರು ಬಜಿರೆ ಎರಡನೇ ಬ್ಲಾಕ್ ಬಿಜೆಪಿ ಘಟಕ ಇವರು ವಹಿಸಿದ್ದರು.