ಶ್ರೀ ಕ್ಷೇತ್ರ ಧರ್ಮಸ್ಥಳ: ಸವ೯ಧಮ೯ ಸಮ್ಮೇಳನ 88 ನೇ ಅಧಿವೇಶನ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧಮಾ೯ಧಿಕಾರಿ ಡಾ. ಹೆಗ್ಗಡೆ ಯವರಿಗೆ ಭಾರತ ರತ್ನ ಪ್ರಶಸ್ತಿ  ದೊರೆಯಲಿ: ಸಚಿವ ಸೋಮಣ್ಣ 

ಧಮ೯ಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ಕಾತಿ೯ಕ ಮಾಸದ ಮಂಗಳ ಪವ೯ದಲ್ಲಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವದ ಅಂಗವಾಗಿ ಸವ೯ಧಮ೯ ಸಮ್ಮೇಳನದ 88 ನೇ ಅಧಿವೇಶನ ಡಿ.13 ಇಂದು ಸಂಜೆ ಧಮ೯ಸ್ಥಳದ ಅಮೃತವಷಿ೯ಣಿ ಸಭಾ ಭವನದಲ್ಲಿ ಜರುಗಿತು.

ಸಮ್ಮೇಳನವನ್ನು ರಾಜ್ಯ ಸರಕಾರದ ವಸತಿ ಸಚಿವ ವಿ.ಸೋಮಣ್ಣ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿ, ಸವ೯ಧಮ೯ಗಳ ನೆಲಬೀಡಾದ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಯಾವುದೇ ಸರಕಾರ ಮಾಡದ ಕಾಯ೯ಗಳನ್ನು  ಡಾ. ಹೆಗ್ಗಡೆ ಅವರು ಮಾಡುತ್ತಿದ್ದಾರೆ. ಇಂತಹ ಮಾಹಾತ್ಕಾಯ೯ವನ್ನು ಮಾಡುತ್ತಿರುವ ಹೆಗ್ಗಡೆ ರವರಿಗೆ ಭಾರತ ರತ್ನ ಪ್ರಶಸ್ತಿ ದೊರೆಯಲಿ ಎಂದು ಹರಿಸಿದರು.  ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಕನಕಗಿರಿ ಜೈನ ಮಠದ ಪರಮಪೂಜ್ಯ ಶ್ರೀ ಭುವನಕೀತಿ೯ ಭಟ್ಟಾರಕ ಸ್ವಾಮೀಜಿ ವಹಿಸಿದ್ದರು.
ಶ್ರೀ ಕ್ಷೇತ್ರ ಧಮ೯ಸ್ಥಳದ ಧಮಾ೯ಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಸ್ವಾಗತಿಸಿ, ಧಮ೯ದಲ್ಲಿ ಸತ್ವವಿದೆ ಸತ್ಕಾಯ೯ಕ್ಕೆ ಪ್ರೇರಣೆ ಇದೆ ಹೊರತಾಗಿ ದುಷ್ಕಾಯ೯ಗಳಿಗಲ್ಲ. ಧಾಮಿ೯ಕ ತಳಹದಿಯಲ್ಲಿ ಕೈಗೊಳ್ಳುವ ಕಮ೯ಗಳು ಸತ್ಪರಿಣಾಮವನ್ನೇ ಉಂಟು ಮಾಡುತ್ತದೆ. ಧಮ೯ವು ಎಲ್ಲರನ್ನೂ ಒಗ್ಗೂಡಿಸುವ ಸಾಧನವಾಗಿದೆ ಎಂದರು. ಬೆಂಗಳೂರು ಸೃಷ್ಟಿ ಮಣಿಪಾಲ್ ಇನ್ಸ್ಟಿಟ್ಯೂಟ್ ನ ಬೋಧಕರು ಹಾಗೂ ಖ್ಯಾತ ಕಥೆಗಾರರಾದ ಕೇಶವ ಮಲಗಿ ಹಾಗೂ ಉಡುಪಿ ಧಮ೯ಪ್ರಾಂತ್ಯದ ಬಿಷಪ್ ಹೌಸ್ ನ ಸಾವ೯ಜನಿಕ ಸಂಪಕ೯ ಅಧಿಕಾರಿ ರೆ।ಫಾ। ಚೇತನ್ ಲೋಬೊ ಧಾಮಿ೯ಕ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ,
ಡಿ.ಹಷೇ೯ದ್ರ ಕುಮಾರ್. ಡಿ.ಸುರೇಂದ್ರ ಕುಮಾರ್, ಡಾ.ಯಶೋವಮ೯, ಸಚಿವರ ಪತ್ನಿ ಶೈಲಾ ಉಪಸ್ಥಿತರಿದ್ದರು.
ಶ್ರೀ ಧ.ಮಂ. ಪ್ರಕೃತಿ ಚಿಕಿತ್ಸಾ ಮಹಾವಿದ್ಯಾವಯದ ವಿದ್ಯಾರ್ಥಿಗಳು ಪ್ರಾಥ೯ನೆ ಹಾಡಿದರು. ಉಪನ್ಯಾಸಕ ಸುನೀಲ್ ಪಂಡಿತ್ ಮತ್ತು ಡಾ.ಯಶೋವಮ೯ ಸನ್ಮಾನ ಪತ್ರ ವಾಚಿಸಿದರು
ಉಪನ್ಯಾಸಕರನ್ನು ಸ್ವಾಗತ ಸಮಿತಿ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಸನ್ಮಾನಿಸಿದರು. ಉಪನ್ಯಾಸಕ ಶ್ರೀ ಧರ ಭಟ್.ಕಾಯ೯ಕ್ರಮ ನಿರೂಪಿಸಿ,ಲಾಯಿಲ ದೇವಸ್ಥಾನದ ಆಡಳಿತ ಮೋಕ್ತೇಸರ ಡಾ.ಸುಧೀರ್ ಪ್ರಭು ಎಂ. ವಂದಿಸಿದರು.
ನಂತರ ಸಂಗೀತ ಕಲಾರತ್ನ ಡಾ. ಆರ್ ಮಂಜುನಾಥ್ ಮತ್ತು ತಂಡದವರಿಂದ ಸ್ಯಾಕ್ಸೋಫೋನ್ ವಾದನ ಕಾಯ೯ಕ್ರಮ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.