ಭಜನಾ ಸಾಮ್ರಾಟ್ ಸ್ಪರ್ಧಾ ಕಾರ್ಯಕ್ರಮ  ಡಾ| ಹೆಗ್ಗಡೆಯವರಿಂದ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಧರ್ಮಸ್ಥಳ: ವಿಶ್ವಾದ್ಯಂತ ಭಜನೆಯ ಮನೆ ಮಾತಾಗಿರುವ ಶಂಕರ ಟಿ.ವಿ.ಯವರ 6ನೆಯ ಭಜನಾ ಸ್ಪರ್ದಾ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು. ನಂತರ ಅವರು ಮಾತನಾಡಿ ಶಂಕರ ಟಿ.ವಿಯು ಭಜನೆಯನ್ನು ವಿಶ್ವಕ್ಕೆ ವ್ಯಾಪಿಸಿ ಮನೆ ಮಂದಿ ನೊಡುವಂತೆ ಮಾಡಿದೆ. ಬಹುಮಾನದ ಮೊತ್ತದಿಂದ ಭಜನೆಗೆ ಮೌಲ್ಯ ಬಂದಿದೆ. ಭಜನೆಗೆ ಭಗವಂತನೆ ಸಾಮ್ರಾಟ್. ಸಾಮ್ರಾಟ್ ಬಳಿ ಹೋಗಬೇಕಾದರೆ ಭಕ್ತಿ, ಭಜನೆ ಬೇಕು. ಇದನ್ನು ಶಂಕರ ಟಿ.ವಿ.ಯವರು ಮಾಡುತ್ತಿರುವುದು ಅಭಿನಂದನೀಯ ಎಂದು ಶುಭಕೊರಿದರು.

ಕಾರ್ಯಕ್ರಮದಲ್ಲಿ ಶಂಕರ ಟಿ.ವಿ ಅಧಿಕಾರಿ ಅರವಿಂದ್ ಮತ್ತು ಕು.ನಿತ್ಯಾ ಹಾಜರಿದ್ದರು. ರಾಜ್ಯದ 6 ಮುಖ್ಯ ಕಡೆಯಲ್ಲಿ ನಡೆಯಲಿರುವ ಈ ಭಜನಾ ಸಾಮ್ರಾಟ್ ಕಾರ್ಯಕ್ರಮ ‌ಪ್ರಥಮ‌ ತಂಡಕ್ಕೆ‌ ರೂ 10 ಲಕ್ಷ ಮತ್ತು ದೇಶದ ವಿವಿಧ ರಾಜ್ಯದಲ್ಲಿ ಸ್ಪರ್ದೆ ನಡೆದು ಪ್ರಥಮ ತಂಡಕ್ಕೆ 50 ಲಕ್ಷ ಬಹಮಾನ‌ ದೊರಕಲಿದೆ. ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆಯಾದ್ಯಂತ ವಿವಿಧ ಭಜನಾ ತಂಡಗಳು ಭಾಗವಹಿಸಿದ್ದರು.

ಕನ್ಯಾ ಕುಮಾರಿ ಯುವತಿ ಮಂಡಳಿಯ ಸದಸ್ಯೆ ಪ್ರಾರ್ಥಿಸಿ,  ನಿರ್ದೇಶಕಿ ಶ್ರೀಮತಿ ಮಮತಾರಾವ್ ಸ್ವಾಗತಿಸಿ, ಭಜನಾ ಪರಿಷತ್ತಿನ ಬಿ.ಜಯರಾಮ ನೆಲ್ಲಿತ್ತಾಯ ಧನ್ಯವಾದವಿತ್ತರು.  ಯೋಜನಾಧಿಕಾರಿ  ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.