ನೆರಿಯ: ಮತಗಟ್ಟೆ ಪರಿಶೀಲನೆ ವೇಳೆ ಅಧಿಕಾರಿಗಳಿಗೆ ಎದುರಾದ ಒಂಟಿ ಸಲಗ; ತಪ್ಪಿದ ಅನಾಹುತ

ನೆರಿಯ: ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಂಜಾರು ಮಲೆ ಪ್ರದೇಶದ ಚುನಾವಣೆ ಮತಗಟ್ಟೆ ಪರಿಶೀಲನೆಗೆ ತೆರಳಿದ ಅಧಿಕಾರಿಗಳಿಗೆ ರಸ್ತೆಯಲ್ಲಿ ಒಂಟಿ ಸಲಗ ಎದುರಾದ ಘಟನೆ ಬೆಳಕಿಗೆ ಬಂದಿದೆ.

   
ನೆರಿಯ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ, ಚುನಾವಣಾ ಅಧಿಕಾರಿ ರಘು, ಸಹಾಯಕ ಚುನಾವಣಾಧಿಕಾರಿ ಅಜಿತ್ ಹಾಗೂ ನೆರಿಯ ಗ್ರಾ.ಪಂ ಸಿಬ್ಬಂದಿಗಳು ಚಾರ್ಮಾಡಿ ಘಾಟಿಯ 9ನೇ ತಿರುವಿನಿಂದ ಸುಮಾರು 15 ಕಿ.ಮೀ ಒಳ ಪ್ರದೇಶದಲ್ಲಿರುವ ಬಾಂಜಾರುಮಲೆ ಪ್ರದೇಶದ ಚುನಾವಣಾ ಮತಗಟ್ಟೆ ಪರಿಶೀಲನೆಗೆ ಬಾಡಿಗೆ ವಾಹನದ ಮೂಲಕ ತೆರಳಿದ್ದರು.


ಕಾಡಿನಿಂದ ಆವೃತ್ತವಾಗಿರುವ ಈ ಪ್ರದೆಶದಲ್ಲಿ ಸುಮಾರು 260 ಮತದಾರರಿಗೆ ಬಾಂಜಾರುಮಲೆ ಸಮುದಾಯ ಭವನದಲ್ಲಿ ಮತಗಟ್ಟೆ ಸಂಖ್ಯೆ 86ರಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಪರಿಶೀಲನೆ ನಡೆಸಿ ಅಲ್ಲಿಂದ ಮರಳುವ ವೇಳೆ ಏನೆಪೋಯ ವಿದ್ಯುತ್ ಘಟಕದ ಡ್ಯಾಂ ಬಳಿ ಒಂಟಿಸಲಗ ಎದುರಾಗಿದೆ.


ಒಂಟಿ ಸಲಗವನ್ನು ಕಂಡ ಅಧಿಕಾರಿಗಳು ಅಪಾಯದ ಮುನ್ಸೂಚನೆಯನ್ನು ಅರಿತು ಸಮೀಪದ ಕಿರುರಸ್ತೆಯಲ್ಲಿ ವಾಹನವನ್ನು ತಿರುವು ಹಾಕಿದ್ದು, ಆನೆ ಹಾದು ಹೋಗುವವರೆಗೆ ಸುಮಾರು 1 ಗಂಟೆಯ ಕಾಲ ಅಲ್ಲೇ ತಟಸ್ಥರಾಗಿ ಉಳಿಯಬೇಕಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.