ಸರಕಾರ ಈಡಿ ಹಾಗೂ ಇತರ ಏಜೆನ್ಸಿಗಳನ್ನು ಪಿಎಫ್‌ಐ ವಿರುದ್ಧ ಅಸ್ತ್ರವಾಗಿ ದುರ್ಬಳಕೆ ಮಾಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಸರಕಾರ ಈಡಿ ಹಾಗೂ ಇತರ ಏಜೆನ್ಸಿಗಳನ್ನು ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ವಿರುದ್ಧ ಅಸ್ತ್ರವಾಗಿ ದುರ್ಬಳಕೆ ಮಾಡುತ್ತಿರುವುದನ್ನು ಖಂಡಿಸಿ ಪಿಐಎಫ್ ವತಿಯಿಂದ ಡಿ. 11 ರಂದು ಬೆಳ್ತಂಗಡಿ ಬಸ್ಸು ನಿಲ್ದಾಣ ಬಳಿ ಪ್ರತಿಭಟನೆ ನಡೆಯಿತು.
ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದ ಈಡಿ ಅತ್ಯಂತ ಕನಿಷ್ಠ ಹಣಕಾಸಿನ ಮೂಲ ಮತ್ತು ವ್ಯವಹಾರಗಳನ್ನು ಹೊಂದಿರುವ ಗುಂಪುಗಳು ಮತ್ತು ಎನ್‌ಜಿಒಗಳನ್ನು ಈಡಿ ಮುಟ್ಟಲೂ ಭಯಪಡುತ್ತಿದೆ.

ಈಡಿ ಮತ್ತು ಇತರ ಸರಕಾರಿ ಏಜೆನ್ಸಿಗಳು ಆಡಳಿತಾರೂಢ ಬಿಜೆಪಿ ಆರ್‌ಎಸ್‌ಎಸ್ ಅಥವಾ ಯಾವುದೇ ಸಂಘಟನೆ ವ್ಯಕ್ತಿಗಳ ಕೈಗಳಲ್ಲಿ ಅಸ್ತ್ರವಾಗಿ ಕಾರ್ಯಾಚರಿಸಬಾರದು. ಅದು ಸ್ವತಂತ್ರವಾಗಿ ಭಾರತೀಯ ಸಂವಿಧಾನ ಮತ್ತು ಕಾನೂನಿಗೆ ತಲೆಬಾಗಿ ಕೆಲಸ ಮಾಡುವ ಮೂಲಕ ತಮ್ಮ ಘನತೆಯನ್ನು ಉಳಿಸಿಕೊಳ್ಳುವಂತಾಗಬೇಕು. ಜೊತೆಗೆ ಕಾನೂನು ರಕ್ಷಣೆಯ ಜವಾಬ್ಧಾರಿಯನ್ನು ಪೂರೈಸುವ ನಿಟ್ಟಿನಲ್ಲಿ ಅದರ ದುರ್ಬಳಕೆಯನ್ನು ತಡೆಯಬೇಕೆಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.