ನಿಡ್ಲೆ: ರಬ್ಬರ್ ಮತ್ತು ಜೇನು ಕೃಷಿ ಮಾಹಿತಿ ಶಿಬಿರ

ನಿಡ್ಲೆ: ನಿಡ್ಲೆ ರಬ್ಬರ್ ಉತ್ಪಾದಕರ ಸಂಘ ಮತ್ತು ಅಳದಂಗಡಿ ತೋಟಗಾರಿಕ ರೈತ ಉತ್ಪಾದಕರ ಕಂಪನಿ ವತಿಯಿಂದ ನಿಡ್ಲೆಯ ಖಂಡಿಗ ಮನೆಯಲ್ಲಿ ರಬ್ಬರ್ ಮತ್ತು ಜೇನು ಕೃಷಿ ಬಗ್ಗೆ ಮಾಹಿತಿ ಶಿಬಿರ ನಡೆಯಿತು.
ರಬ್ಬರ್ ಬೋರ್ಡ್‌ನ ಅಧಿಕಾರಿ ಬಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿ ರಬ್ಬರ್ ಉತ್ಪಾದನೆ ಭಾರತದಲ್ಲಿ ಈಗ ಬಹಳ ಕಡಿಮೆ ಇದೆ ಆದರೆ ಟ್ಯಾಪಿಂಗ್ ಮಾಡದ ಮರಗಳು ಹೆಚ್ಚು ಇದೆ. ಮುಂದಿನ ದಿನಗಳಲ್ಲಿ ರಬ್ಬರ್ ಟ್ಯಾಪಿಂಗ್ ಟ್ರೈನಿಂಗ್ ನಡೆಸಿ ಎಲ್ಲ ಮರಗಳನ್ನು ಟ್ಯಾಪಿಂಗ್ ಮಾಡಬೇಕು ನಂತರ ಜೇನು ಕೃಷಿ ಮಾಡಿ ರೈತರಿಗೆ ಲಾಭ ತರುವಂತೆ ಮಾಡಬಹುದು ಎಂದರು.


ಕಾರ್ಯಕ್ರಮದಲ್ಲಿ ರಬ್ಬರ್ ಬೋರ್ಡ್‌ನ ಜೋಯಿ ಜೋನ್ ಮಾತನಾಡಿ ಮಂದಿನ ದಿನದಲ್ಲಿ ರಬ್ಬರ್ ಟ್ರೈನಿಂಗ್ ನಡೆಸಲು ರಬ್ಬರ್ ಮಂಡಳಿ ಸಹಕರಿಸುತ್ತದೆ ಎಂದರು. ಅಳದಂಗಡಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಹರಿದಾಸ್, ಸತ್ಯನಾರಾಯಣ ರಾವ್, ವೆಂಕಟೇಶ್ ಮಯ್ಯ, ಸುಧೀಂದ್ರ, ಪದ್ಮನಾಭ ಗೌಡ, ಸುಕನ್ಯ, ಮನೋಹರ, ಸಂಜೀವ ನಾಯ್ಕ್, ರೇಖಾ ಮತ್ತಿತರರು ಉಪಸ್ಥಿತರಿದ್ದರು.


ಸ್ವಸಹಾಯ ಗುಂಪುಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಕೆ. ಬದ್ರಯ್ಯ ಗೌಡ ರವರಿಗೆ ಜೇನು ಪೆಟ್ಟಿಗೆ ವಿತರಿಸಲಾಯಿತು. ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.