ಉಜಿರೆ ರಬ್ಬರ್ ಸೊಸೈಟಿ ಮಹಾಸಭೆ

ಉಜಿರೆ: ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ ಇದರ ವಾರ್ಷಿಕ ಮಹಾಸಭೆಯು ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾ ಮಂಟಪದಲ್ಲಿ ಡಿ.11 ರಂದು ಜರುಗಿತು.
ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ 2019-20ನೇ ಸಾಲಿನಲ್ಲಿ ಸಂಘವು ರೂ.17.88 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.7 ಡಿವಿಡೆಂಟ್ ಘೋಷಿಸಿದರು. ಸದಸ್ಯರ ಉತ್ಪನ್ನಗಳಿಗೆ ಅತ್ಯಧಿಕ ಧಾರಣೆ ದೊರೆಯಲು ಸದಸ್ಯರನ್ನು ಅಂತಾರಾಷ್ಟ್ರೀಯ ಮಟ್ಟದ ಅತ್ಯುತ್ತಮ ದರ್ಜೆಯ ರಬ್ಬರ್ ಬೆಳೆಯಾದ RSS-IX  ರಬ್ಬರ್ ತಯಾರಿಸಲು ಪ್ರೋತ್ಸಾಹಿಸಿ ಮಾರುಕಟ್ಟೆ ಒದಗಿಸಿರುತ್ತೇವೆ. ವರದಿ ಸಾಲಿನಲ್ಲಿ ಒಟ್ಟು 587 ಟನ್ ರಬ್ಬರ್ ಉತ್ಪಾದನೆಯಾಗಿದ್ದು , RSS ಧಾರಣೆಗಿಂತ ಕನಿಷ್ಟ 5.ರೂ ನಿಂದ 17.ರೂ ವರಗೆ ಅಧಿಕ ಧಾರಣೆಯು ಬೆಳೆಗಾರರಿಗೆ ದೊರಕಿರುತ್ತದೆ ಎಂದರು.

ರಬ್ಬರ್ ಸೊಸೈಟಿ ಉಪಾಧ್ಯಕ್ಷ ಅನಂತ ಭಟ್ ಎಂ, ಸಂಘದ ನಿರ್ದೇಶಕರಾದ ಜಯಶ್ರೀ ಡಿ ಎಂ, ಸೀತಾರತ್ನ, ಬೈರಪ್ಪ ಹರಿಜನ, ಕೆ ರಾಮ ನಾಯ್ಕ, ಸೋಮನಾಥ ಬಂಗೇರ, ಗ್ರೇಸಿಯಸ್ ವೇಗಸ್, ಇ.ಸುಂದರ ಗೌಡ, ಎನ್.ಪದ್ಮನಾಭ, ಕೆ.ಜೆ.ಅಗಸ್ಟಿನ್, ವಿವಿ ಅಬ್ರಹಾಂ, ಹೆಚ್ ಪದ್ಮ ಗೌಡ, ಬಾಲಕೃಷ್ಣ ಗೌಡ ಕೇರಿಮಾರ್, ಶಶಿಧರ ಡೋಂಗ್ರೆ, ರಬ್ಬರ್ ಪ್ರೊಡಕ್ಷನ್ ಡೈರೆಕ್ಟರ್ ಎಸ್ ಬಾಲಕೃಷ್ಣ, ವಿಶೇಷ ಆಹ್ವಾನಿತರಾದ ಅಬ್ರಹಾಂ.ಬಿ.ಎಸ್, ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ ಕಾರ್ಯಕ್ರ್ರಮ ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.