ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ಅಂಗವಾಗಿ ಉಜಿರೆಯಿಂದ ಧರ್ಮಸ್ಥಳಕ್ಕೆ ನಡೆದ ಪಾದಯಾತ್ರೆಯ ಸಮಾರೋಪದಲ್ಲಿ ಸಾವಿರಾರು ಭಕ್ತಾದಿಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಆಶೀರ್ವಚನ ನೀಡಿದರು.
ದೇಶಕ್ಕೆ ಯಾವುದೇ ಮುನ್ಸೂಚನೆ ಇಲ್ಲದೆ ಕೊರೋನಾ ಖಾಯಿಲೆ ಬಂದಿದೆ. ಅಪಾಯ ಮಟ್ಟ ಕಮ್ಮಿಯಾಗ ಬೇಕಾದರೆ 8 ತಿಂಗಳು ಕಳೆಯಿತು.
ಕ್ಷೇತ್ರದ ಜಾತ್ರೆ ಕಾರ್ಯಕ್ರಮ ನಡೆಸಲು ದೇವರಲ್ಲಿ ಪ್ರಶ್ನೆ ಕೇಳುವಾಗ ಯಾವುದೂ ಬೇಡ ಎನ್ನುವ ಉತ್ತರ ಲಭಿಸಿತು. ಯಾವುದಕ್ಕೂ ಜೀವನವೇ ಮುಖ್ಯ. ಜೀವನವೇ ಇಲ್ಲದಿದ್ದರೆ ಬೇರೇನೂ ಇಲ್ಲ.ಮತ್ತೆ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಈ ವರ್ಷ 1135 ದೇವಸ್ಥಾನಗಳಿಗೆ ಕ್ಷೇತ್ರದ ವತಿಯಿಂದ ಧನ ಸಹಾಯ ಮಾಡಲಾಗಿದೆ. ಕ್ಷೇತ್ರದಲ್ಲಿ ಧರ್ಮಕಾರ್ಯ ಅವಿರತವಾಗಿ ನಡೆದಿದೆ. ವಿಶ್ವಾಸಕ್ಕೆ ಪ್ರತೀತಿ ಶ್ರೀ ಕ್ಷೇತ್ರ ಧರ್ಮಸ್ಥಳ. ಧರ್ಮಸ್ಥಳಕ್ಕೆ ಒಂದು ಬ್ರಾಂಡ್ ಇದೆ.
ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಆಗಿಲ್ಲ. ಆದರೆ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಎಲ್ಲಾ ದಾಖಲಾತಿ ಭರ್ತಿಯಾಗಿದೆ. ಕ್ಷೇತ್ರದ ಭಕ್ತಿ ಎಲ್ಲಾ ದೇಶಕ್ಕೆ ತಲುಪಿದೆ. 537 ರುಡ್ಸೆಟ್ ಸಂಸ್ಥೆಯಲ್ಲಿ ತರಬೇತಿಗಳು ಯಥಾಸ್ಥಿತಿಯಲ್ಲಿ ನಡೆದಿದೆ. ಕೊರೋನಾ ಸಂದರ್ಭ 40 ಸಾವಿರ ಸ್ವಸಹಾಯ ಸಂಘಗಳ ರಚನೆಯಾಗಿದೆ. 4 ಲಕ್ಷ ಸದಸ್ಯರು ಸೇರ್ಪಡೆಗೊಂಡಿದ್ದಾರೆ. ಕಷ್ಟಕ್ಕೊಳಗಾದ ಕುಟುಂಬಗಳಿಗೆ ಶ್ರೀಮತಿ ಹೇಮಾವತಿ ಹೆಗ್ಗಡೆಯವರಿಂದ ವಾತ್ಸಲ್ಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು
ಧರ್ಮಸ್ಥಳದ ಅಮೃತವರ್ಷಿಣಿಯಲ್ಲಿ ಪಾದಯಾತ್ರಿಗಳನ್ನು ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ರವರು ಉಜಿರೆ ಜನಾರ್ಧನ ದೇವಸ್ಥಾನದ ಶರತ್ ಕೃಷ್ಣ ಪಡ್ವೆಟ್ನಾಯ ರವರಿಗೆ ತಾಂಬೂಲ ನೀಡಿ ಮುಖ್ಯದ್ವಾರದ ಬಳಿ ಸ್ವಾಗತಿಸಿದರು. ಈ ಸಂದರ್ಭ ಧರ್ಮಸ್ಥಳದ ವೀರು ಶೆಟ್ಟಿ, ಧರ್ಮಸ್ಥಳದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಜಿರೆ ಜನಾರ್ಧನ ದೇವಸ್ಥಾನದ ಶರತ್ಕೃಷ್ಣ ಪಡ್ವೆಟ್ನಾಯ ಉಪಸ್ಥಿತರಿದ್ದರು.
ಪಾದಯಾತ್ರೆ ಸಮಿತಿ ಮುಖ್ಯಸ್ಥ ಡಾ. ಬಿ. ಯಶೋವರ್ಮ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಹಕ ನಿರ್ದೇಶಕರು ಡಾ. ಎಲ್ ಹೆಚ್. ಮಂಜುನಾಥ್, ಮೋಹನ್ ಶೆಟ್ಟಿಗಾರ್, ಲಕ್ಷ್ಮೀ ಗ್ರೂಪ್ನ ಮೋಹನ್ ಕುಮಾರ್, ಭುಜಬಲಿ, ಸೋಮಶೇಖರ್ ಶೆಟ್ಟಿ, ಪಿ ಕೆ ರಾಜು ಪೂಜಾರಿ, ವಸಂತ ಸಾಲಿಯಾನ್, ಅಡೂರ್ ವೆಂಕಟರಾಯ, ಇಂಜಿನಿಯರ್ ಜಗದೀಶ ಪ್ರಸಾದ್, ಮೋಹನ್ ಬೈಪಾಡಿತ್ತಾಯ, ಧನಂಜಯ್ ಬಿ. ಕೆ., ಯುಸಿ ಪೌಲೋಸ್, ರತ್ನ ವರ್ಮ ಭುನ್ನು, ಡಾ. ಎಂ ಪಿ. ಶ್ರೀನಾಥ್, ಎಂ ಜಿ. ಶೆಟ್ಟಿ, ಪುಷ್ಪರಾಜ್ ಜೈನ್, ಕಿರಣ್ ಕುಮಾರ್ ಶೆಟ್ಟಿ, ವಸಂತ ಶೆಟ್ಟಿ ಶ್ರದ್ಧಾ, ವಿಶ್ವನಾಥ್ ಹೊಳ್ಳ, ಕಿಶೋರ್ ಹೆಗ್ಡೆ, ಕುಮಾರ್ ಹೆಗ್ಡೆ, ಮೊದಲಾದವರು ಉಪಸ್ಥಿತರಿದ್ದರು.
ಬದುಕು ಕಟ್ಟೋಣ ತಂಡದ ಮುಖ್ಯಸ್ಥ ರಾಜೇಶ್ ಪೈ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಶ್ರೀಧರ್ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಮೆರವಣಿಗೆಯಲ್ಲಿ ಬದುಕು ಕಟ್ಟೋಣ ತಂಡದ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ಕುಡಿಯುವ ನೀರಿನ ವ್ಯವಸ್ಧೆ, ಮೆರವಣಿಗೆ ವ್ಯವಸ್ಧೆ, ಮಾಡಿ ಸಹಕರಿಸಿದರು. ಈ ಸಂದರ್ಭ ಟ್ರಾಫಿಕ್ ಪೊಲೀಸ್ ಹಾಗೂ ಪೊಲೀಸ್ ಸಿಬ್ಬಂದಿ ಸಹಕರಿಸಿದರು.