ಬೆಳ್ತಂಗಡಿ: ಅನುಮತಿ ಇಲ್ಲದೆ ಭಿತ್ತಿ ಪತ್ರಗಳನ್ನು ಹಾಕಿದ ಪಿ.ಎಫ್.ಐ ಅಧ್ಯಕ್ಷನ ಮೇಲೆ ಪ್ರಕರಣ ದಾಖಲು

 

 

ಅನುಮತಿ ಇಲ್ಲದೆ ಭಿತ್ತಿ ಪತ್ರಗಳನ್ನು ಹಾಕಿದ ಪಿಎಫ್ಐ ಅಧ್ಯಕ್ಷ ನ ಮೇಲೆ ಪ್ರಕರಣ ದಾಖಲು

 


ಬೆಳ್ತಂಗಡಿ: ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಗೋಡೆಗೆ ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆಯದೆ ಬಿತ್ತಿ ಪತ್ರಗಳನ್ನು ಅಂಟಿಸಿದ ಪಾಪ್ಯೂಲರ್ ಪ್ರಿಂಟ್ ಸಂಘಟನೆ ಯ ಅಧ್ಯಕ್ಷ ಮುಸ್ತಾಫ ಎಂಬವರ ಮೇಲೆ ಬೆಳ್ತಂಗಡಿ ಪೊಲೀಸ್ ರು ಪ್ರಕರಣ ದಾಖಲಾಗಿಸಿಕೊಂಡಿದ್ದಾರೆ.
ಬೆಳ್ತಂಗಡಿ
ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ನೀಡಿದ ದೂರಿನ ತನಿಖೆ ನಡೆಸಿದ ಪೊಲೀಸ್ ರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಿ.11ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ
ಈ ಸಂಘಟನೆಯವರು
ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಈಡಿ ಆರ್.ಎಸ್ಎಸ್ ಆಸ್ತ್ರವಾಗುವುದನ್ನು ತಡೆ ಯೋಣ ದೇಶವ್ಯಾಪಿ ಪ್ರತಿಭಟನೆ ಎಂಬ ಭಿತ್ತಿ ಪತ್ರವನ್ನು
ಅನುಮತಿ ಪಡೆಯದೆ ಅಂಟಿಸಿಸಿರುವುದು ಅಪರಾಧವಾಗಿದೆ. ಈ ಬಗ್ಗೆ ವಿಚಾರಿಸಿದಾಗ ಡಿ.11 ರಂದು ಪ್ರತಿಭಟನೆ ನಡೆಸಲು ವಲಯ ಅಧ್ಯಕ್ಷ ಮುಸ್ತಾಫ ಗುರುವಾಯನಕೆರೆ ಎಂಬವರು ಪಟ್ಟಣ ಪಂಚಾಯಿತಿಗೆ ಅನುಮತಿಗೆ ಅಜಿ೯ ಸಲ್ಲಿಸಿದ್ದು, ಪಂಚಾಯಿತಿ ನಿಂದ ಯಾವುದೇ ಬ್ಯಾನರ್, ಭಿತ್ತಿ ಪತ್ರಗಳನ್ನು ಹಾಕಲು ಅನುಮತಿ ನೀಡಿಲ್ಲ. ಆದರೆ ಸದ್ರಿ ಸಂಘಟನೆ ಯವರು ಅನುಮತಿ ಇಲ್ಲದೇ ಭಿತ್ತಿ ಪತ್ರಗಳನ್ನು ಹಾಕಿರುವುದರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.