ಬೆಳ್ತಂಗಡಿ: ಶಿಬಾಜೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಮಾಧವ ಗೌಡ ಖಂಡಿಗ, ಶಿಬಾಜೆ ಗ್ರಾ.ಪಂ ಮಾಜಿ ಸದಸ್ಯ ಪೈಲಿ ಟಿ ಎ, ಹತ್ಯಡ್ಕ ಸಹಕಾರಿ ಸಂಘದ ನಿರ್ದೇಶಕ ಶೇಖರ ಶೆಟ್ಟಿಗಾರ್ ಬಲ್ಲಡ್ಕ, ಬಾಲಚಂದ್ರ ಶೆಟ್ಟಿಗಾರ್ ನೂಜಿ ಇವರುಗಳು ಮಾಜಿ ಶಾಸಕ ವಸಂತ ಬಂಗೇರ ರವರ ಕಛೇರಿಯಲ್ಲಿ ಡಿ.10 ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಮಾಜಿ ಶಾಸಕ ವಸಂತ ಬಂಗೇರರವರು ಅವರಿಗೆ ಪಕ್ಷದ ಧ್ವಜವನ್ನು ನೀಡಿ ಪಕ್ಷಕ್ಕೆ ಸೇರ್ಪಡೆಗೊಳಿಸಿದರು.
ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್, ಶಿಬಾಜೆ ಗ್ರಾ.ಪಂ ಮಾಜಿ ಅಧ್ಯಕ್ಷೆ ಸಿ ಮ್ಯಾಥ್ಯೂ, ಮಾಜಿ ಉಪಾಧ್ಯಕ್ಷ ಸಿ ಎಂ ಜಾರ್ಜ್, ಶಿಬಾಜೆ ಗ್ರಾಮ ಸಮಿತಿ ಅಧ್ಯಕ್ಷ ಶ್ರೀಧರ ರಾವ್ ಅಜಿರಡ್ಕ, ಬೂತ್ ಸಮಿತಿ ಅಧ್ಯಕ್ಷ ವಸಂತ ಕಲ್ಲಾಜೆ ಇವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.