ಮೂಡುಕೋಡಿಯಲ್ಲಿ ಬಿಜೆಪಿ ಗ್ರಾಮ ಸಮಿತಿಯ ನೂತನ ಕಾರ್ಯಾಲಯ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

  

ವೇಣೂರು: ವೇಣೂರು ಗ್ರಾ.ಪಂ. ವ್ಯಾಪ್ತಿಯ ಮೂಡುಕೋಡಿಯಲ್ಲಿ ಬಿಜೆಪಿ ಗ್ರಾಮ ಸಮಿತಿಯ ನೂತನ ಕಾರ್ಯಾಲಯವು ಯುವ ನಾಯಕ ಅನೂಪ್ ಜೆ ಪಾಯಸ್ ರವರ ನೇತೃತ್ವದಲ್ಲಿ ಡಿ.10 ರಂದು ಉದ್ಘಾಟನೆಗೊಂಡಿತು.
ಮೂಡಬಿದ್ರೆಯ ನ್ಯಾಯವಾದಿ ನಾಗೇಶ್ ಶೆಟ್ಟಿ ಡಿ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮದ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಲು ಇಂತಹ ಕಚೇರಿಗಳ ಅಗತ್ಯವಿದೆ ಎಂದರು. ನಾರಾವಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಅಂಡಿಂಜೆ ದೀಪ ಬೆಳಗಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಶಾಸಕ ಹರೀಶ್ ಪೂಂಜರವರ ಗ್ರಾಮ ರಾಜ್ಯದ ಕಲ್ಪನೆ ಈ ಕಚೇರಿ ಮೂಲಕ ಸಾಕಾರಗೊಳ್ಳಲಿದೆ ಎಂದರು.


ವೇಣೂರು ಗ್ರಾ.ಪಂ. ಸದಸ್ಯರಾದ ಜೆಸ್ಸಿ ಟೀಚರ್, ಹರೀಶ್ ಪಿ.ಎಸ್, ವೇಣೂರು ಸಹಕಾರಿ ಸಂಘದ ನಿರ್ದೇಶಕ ಸಂತೋಷ್ ಜೈನ್ ಎಂ.ಆರ್, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಧರ್ಮರಾಜ್ ಕೊಪ್ಪದ ಬಾಕಿಮಾರು, ಕಾರ್ಯದರ್ಶಿ ನಿಖಿಲ್ ಡಿ ಶೆಟ್ಟಿ, ಸದಸ್ಯರಾದ ರಮೇಶ್ ಪೂಜಾರಿ, ರಾಮ್ ಪೂಜಾರಿ ಕಳಸೊಟ್ಟು, ಪ್ರಕಾಶ್ ಹೆಗ್ಡೆ, ಮನ್ವಿತ್ ಭಂಡಾರಿ, ಅಶೋಕ್ ಹೆಗ್ಡೆ, ಪ್ರಣಿತ್ ಭಂಡಾರಿ, ಗಿಲ್ಬರ್ಟ್ ಕೊಡ್ದೇರೊ, ಪ್ರಣಿತ್ ಅಂಡಿಂಜೆ, ಜೇಸನ್ ಕೊಡ್ದೇರೋ, ಸುಕೇಶ್ ಹುರಾಬೆ, ಸಂದೇಶ್ ನೆಲ್ಲಿಗುಡ್ದೆ, ಜಯಂತ್ ಶೆಟ್ಟಿ, ಎಡ್ವರ್ಡ್ ರೇಗೋ, ಭಾರತಿ ನಾಗೇಶ್ ಶೆಟ್ಟಿ ಉಪಸ್ಥಿತರಿದ್ದರು.


ವೇಣೂರು ಗಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ ಹಾಗೂ ಚರ್ಚ್ ಪಾಲನಾ ಪರಿಷತ್ ಉಪಾಧ್ಯಕ್ಷ ಡೆನಿಸ್ ಸಿಕ್ವೇರಾ ಆಗಮಿಸಿ, ನೂತನ ಕಚೇರಿಗೆ ಶುಭ ಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.