ಬೆಳ್ತಂಗಡಿ: ಅಂಗನವಾಡಿ ಕಾರ್ಯಕರ್ತೆಯರು ನಮ್ಮ ದೇಶದ ಭವಿಷ್ಯವನ್ನು ರೂಪಿಸುತ್ತಿರುವವರು. ಪುಟಾಣಿ ಮಕ್ಕಳ ಆರೈಕೆಯೊಂದಿಗೆ ಅವರಿಗೆ ಆಟ-ಪಾಠ ಕಲಿಸುವ ಜವಾಬ್ಧಾರಿಯುತ ಕಾಯಕದ ಜೊತೆಗೆ ಸರಕಾರ ವಹಿಸುವ ಎಲ್ಲಾ ಇತರೆ ಕೆಲಸ ಕಾರ್ಯಗಳನ್ನು, ಚುನಾವಣಾ ಜವಾಬ್ಧಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮರ್ಪಕ ವೇತನ ಹಾಗೂ ಪಿಂಚನಿ ಯೋಜನೆ ಅನುಷ್ಠಾನಗೊಳಿಸುವಂತೆ ಶಾಸಕ ಹರೀಶ್ ಪೂಂಜರವರು ಡಿ.9 ರಂದು ಬೆಂಗಳೂರಿನ ವಿಧಾನಸಭಾ ಸದನದ ಕಲಾಪದಲ್ಲಿ ಆಗ್ರಹಿಸಿದ್ದಾರೆ.
ಅವರ ಈ ಮನವಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಸಶಿಕಲಾ ಜೊಲ್ಲೆ ಯವರಿಂದ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.