ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ಡಿ. 10ರಿಂದ ಡಿ. 14ರ ವರೆಗೆ ನಡೆಯಲಿದ್ದು ಇಡೀ ಧರ್ಮಸ್ಥಳ ದೀಪ ಗಳಿಂದ ಶೃಂಗಾರಗೊಂಡಿದೆ.
ಡಿ. 12 ರಂದು 7ರಿಂದ 8.30ರ ವರೆಗೆ ಸುಗಮ ಸಂಗೀತ ಝೀ ಕನ್ನಡ ಸರಿಗಮಪ ಖ್ಯಾತಿಯ ಕು. ಸಾದ್ವಿನಿ ಕೊಪ್ಪ ಮತ್ತು ತಂಡ ದವರಿಂದ ರಾತ್ರಿ 8.30ರಿಂದ ಬೆಂಗಳೂರು ಶ್ರೀ ಸತ್ಯನಾರಾಯಣ ರಾಜು ಇವರಿಂದ ರಾಮಕಥಾ ನೃತ್ಯರೂಪಕ. ಡಿ. 13 ರಂದು ಸರ್ವ ಧರ್ಮ ಸಮ್ಮೇಳನ ನಡೆಯಲಿದ್ದು, ಸಮ್ಮೇಳನವನ್ನು ಕರ್ನಾಟಕ ರಾಜ್ಯ ವಸತಿ ಸಚಿವ ವಿ. ಸೋಮಣ್ಣ ಉದ್ಘಾಟಿಲಿದ್ದು, ಶ್ರೀ ಕ್ಷೇತ್ರ ಕನಕ ಗಿರಿ ಜೈನ ಮಠದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಯವರು ಅಧ್ಯಕ್ಷತೆ ವಹಿಸುವರು, ಉಪನ್ಯಾಸಕರಾಗಿ ಬೆಂಗಳೂರು ಸೃಷ್ಟಿ ಮಣಿಪಾಲ್ ಇನ್ಸಿಟ್ಯೂಟನ ಬೋಧಕ ಕೇಶವ ಮಳಗಿ, ಉಡುಪಿ ಧರ್ಮಪ್ರಾಂತ್ಯ ದ ಸಾರ್ವಜನಿಕ ಸಂಪರ್ಕಾಧಿಕಾರಿ ರೆ. ಫಾ.ಚೇತನ್ ಲೋಬೊ ಭಾಗವಹಿಸಲಿದ್ದಾರೆ. ರಾತ್ರಿ 8 ರಿಂದ ಸಂಗೀತ ಕಾಲ ರತ್ನ ಡಾ. ಆರ್. ಮಂಜುನಾಥ್ ಮತ್ತು ತಂಡ ಬೆಂಗಳೂರು ಇವರಿಂದ ಸ್ಯಾಕ್ಸೋಫೋನ್ ವಾದನ ಡಿ. 14ರಂದು ಸಾಹಿತ್ಯ ಸಮ್ಮೇಳನ ವನ್ನು ವಿಶ್ರಾಂತ ಪ್ರಾಧ್ಯಾಪಕರಾದ ವೇದಭೂಷಣ ಡಾ. ಎಸ್. ರಂಗನಾಥ್ ಉದ್ಘಾಟಿಸುವರು. ಬೆಂಗಳೂರು ಹಿರಿಯ ಸಾಹಿತಿ ಡಾ. ನರಹಳ್ಳಿ ಬಾಲಸುಬ್ರಮಣ್ಯ ಅಧ್ಯಕ್ಷತೆ ವಹಿಸುವರು. ಮೈಸೂರಿನ ಪ್ರಾಧ್ಯಾಪಕ ಸಂಸ್ಕೃತಿ ಚಿಂತಕ ಡಾ. ಜ್ಯೋತಿ ಶಂಕರ್, ಮೂಡುಬಿದ್ರೆ ವಿಶ್ರಾಂತ ಪ್ರಾಧ್ಯಾಪಕ ಹಿತಿಹಾಸ ಸಂಶೋಧಕ ಡಾ. ಪುಂಡಿಕ್ಕಾ ಗಣಪಯ್ಯ ಭಟ್ ಉಪನ್ಯಾಸ ಮಾಡುವರು. ರಾತ್ರಿ 8ರಿಂದ ನಾರಾಸಿಂಹ ನೃತ್ಯ ರೂಪಕ (ಒಳಿತಿನ ವಿಜಯ ಕಥನ )ಪ್ರದರ್ಶನ ಗೊಳ್ಳಲಿದೆ.
ಡಿ. 10ರಂದು ಹೊಸ ಕಟ್ಟೆ ಉತ್ಸವ, ಡಿ. 11ರಂದು ಕೆರೆ ಕಟ್ಟೆ ಉತ್ಸವ, ಡಿ. 12ರಂದು ಲಲಿತೋದ್ಯಾನ ಉತ್ಸವ, ಡಿ. 13ಕಂಚಿಮಾರುಕಟ್ಟೆ ಉತ್ಸವ, ಡಿ. 14 ಗೌರಿಮಾರುಕಟ್ಟೆ ಉತ್ಸವ ಡಿ. 15ರಂದು ಶ್ರೀ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ ಧಾರ್ಮಿಕ ಕಾರ್ಯಕ್ರಮ ಪ್ರತಿದಿನ ರಾತ್ರಿ 9ಗಂಟೆ ನಂತರ ನಡೆಯಲಿದೆ.