ಚಿಬಿದ್ರೆ ಗ್ರಾಮದ ಉರ್ಪೆಲ್ ಗುಡ್ಡ ಪ್ರದೇಶದಲ್ಲಿ ಕಂಡು ಬಂದ ಚಿರತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಚಿಬಿದ್ರೆ:  ಮಂಗಳೂರು ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯ  ಚಿಬಿದ್ರೆ ಗ್ರಾಮದ ಉರ್ಪೆಲ್ ಗುಡ್ಡ ಪ್ರದೇಶದಲ್ಲಿ ರಾತ್ರಿ ಚಿರತೆ ಕಂಡು ಬಂದಿದೆ. ರಾತ್ರಿ 10ಗಂಟೆ ಸುಮಾರಿಗೆ ಉರ್ಪೆಲ್ ಗುಡ್ಡ ಪ್ರದೇಶದಿಂದ ಕಾಪು ರಕ್ಷಿತಾರಣ್ಯದ ಕಡೆಗೆ ಚಿರತೆ ರಸ್ತೆ ದಾಟುವುದು ಕಕ್ಕಿಂಜೆಯ ಟೆಂಪೋ ಸವಾರರಿಗೆ ಕಂಡು ಬಂದಿದೆ.

ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು,ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ನಿರ್ದೇಶನದಂತೆ ಉಪ ವಲಯ ಅರಣ್ಯಾಧಿಕಾರಿ ಭವಾನಿ ಶಂಕರ್, ಅರಣ್ಯ ರಕ್ಷಕ ಪಾಂಡುರಂಗ ಕಮತಿ ಸ್ಥಳೀಯರ ಸಹಕಾರದಲ್ಲಿ ಪರಿಶೀಲನೆ ನಡೆಸಿದ್ದಾರೆ.ಅ.20ರಂದು ಇದೇ ಪರಿಸರದಲ್ಲಿ ಚಿರತೆ ಕಂಡು ಬಂದಿತ್ತು.
ಭಾನುವಾರ ಈ ಹೆದ್ದಾರಿಯ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಒಂಟಿ ಸಲಗ ಪಿಕ್ ಅಪ್ ವಾಹನದ ಮೇಲೆ ದಾಳಿ ಮಾಡಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.