ತಾನು ಕಲಿತ ಶಾಲೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಿವೃತ ಶಿಕ್ಷಣ ಸಮನ್ವಯಾಧಿಕಾರಿ ಗಣೇಶ್ ಐತಾಳ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ; ಶಿಕ್ಷಣ ಇಲಾಖೆಯಲ್ಲಿ ಅನೇಕ‌ ಹುದ್ದೆಗಳನ್ನು ಯಶಸ್ವಿಯಾಗಿ ಪೂರೈಸಿ ನಿವೃತ್ತರಾಗಿರುವ ಗಣೇಶ್ ಐತಾಳ್ ಅವರು ತನ್ನ 62 ನೇ ಹುಟ್ಟುಹಬ್ಬವನ್ನು ತಾನು ಪ್ರಾಥಮಿಕ ಶಿಕ್ಷಣ ಕಲಿತ ಮುಂಡಾಜೆ ಸರಕಾರಿ ಶಾಲೆಗೆ ಕೊಡುಗೆ ಸಮರ್ಪಿಸುವ ಮೂಲಕ ಆಚರಿಸಿ ಅಭಿಮಾನ ಮೆರೆದಿದ್ದಾರೆ.

ಶತಮಾನೋತ್ಸವದ ಅಂಚಿನಲ್ಲಿರುವ ಮುಂಡಾಜೆ ಉನ್ನತೀಕರಿಸಿದ ಸರಕಾರಿ ಹಿ.ಪ್ರಾ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ನೇತೃತ್ವದಲ್ಲಿ ಮಕ್ಕಳ ಹೆತ್ತವರು ಹಾಗೂ ವಿದ್ಯಾಭಿಮಾನಿಗಳ ಕೂಡುವಿಕೆಯೊಂದಿಗೆ ತಿಂಗಳಲ್ಲಿ ಒಂದು ದಿನ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಈ‌ ಕಾರ್ಯಕ್ರಮದಲ್ಲಿ ಸ್ವಯಂ ಸ್ಪೂರ್ತಿಯಿಂದ ಭಾಗವಹಿಸಿದ ಗಣೇಶ್ ಐತಾಳ್ ಅವರು, ಶಾಲೆಗೆ ಅವಶ್ಯಕವಾಗಿರುವ ಕಬ್ಬಿಣದ ಕಪಾಟನ್ನು ಕೊಡುಗೆಯಾಗಿ ಹಸ್ತಾಂತರಿಸಿದರು.
ಶಾಲಾ ಸ್ವಚ್ಛತೆಗೆ ಬೇಕಾದ ಪರಿಕರಗಳನ್ನೂ ಒದಗಿಸಿದ್ದಲ್ಲದೆ ಅಂದಿನ ಉಪಹಾರವನ್ನೂ ತಾನೇ ಪ್ರಾಯೋಜಿಸುವ ಮೂಲಕ ಇತರರಿಗೆ ಸ್ಪೂರ್ತಿ ತುಂಬಿದರು.
ಈ ಸಂದರ್ಭ ನಡೆದ ಸರಳ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಗಣೇಶ್ ಬಂಗೇರ ಹೂಹಾರ ಹಾಕಿ ಅವರನ್ನು ಗೌರವಿಸಿದರೆ, ಶಿಕ್ಷಕ ವೃಂದದವರು ಹೂ ನೀಡಿ ಆಶೀರ್ವಾದ ಪಡೆದರು.
ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅಶ್ರಫ್ ಆಲಿಕುಂಞಿ ಅಭಿನಂದನಾ ಮಾತುಗಳನ್ನಾಡಿದರು.
ಈ‌ ಸಂದರ್ಭ ಮುಖ್ಯೋಪಾಧ್ಯಾಯಿನಿ ಸೇವಂತಿ, ಸಹಶಿಕ್ಷಕರಾದ ಜಯಶ್ರೀ, ಸುಮಂಗಲಾ, ಎಸ್.ಡಿ.ಎಂ.ಸಿ ಸದಸ್ಯೆ ನಸೀಮಾ, ಹಳೆ ವಿದ್ಯಾರ್ಥಿಗಳಾದ ಸಿದ್ದೀಕ್, ರವಿ ನೆಯ್ಯಾಲು, ನಂದೀಶ ಭಂಡಾರಿ, ಚಂದ್ರಶೇಖರ ಅಂಬಡ್ತ್ಯಾರು, ಅಶ್ವೀರ್ ಹಾಗೂ ಮಕ್ಕಳ ಹೆತ್ತವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.