ಪೆರೋಡಿತ್ತಾಯಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

ತೆಂಕಕಾರಂದೂರು: ಪೆರೋಡಿತ್ತಾಯಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ 2019-2೦ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಡಿ.9ರಂದು ಸಂಘದ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸುಚಿತ್ರಾ ಭಾಗವಹಿಸಿ ಉಪಯುಕ್ತ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎ ಅರ್ಕಕೀರ್ತಿ ಹೆಗ್ಡೆ ವಹಿಸಿದ್ದರು.

2019-20ನೇ ಸಾಲಿನಲ್ಲಿ ಸಂಘವು ರೂ.277437.55 ನಿವ್ವಳ ಲಾಭ ಗಳಿಸಿದೆ. ಸಂಘದ 90 ಮಂದಿ ಹಾಲು ಉತ್ಪಾದಕರಿಗೆ ಸುಮಾರು ರೂ.132450 ನ್ನು ಬೋನಸ್ ರೂಪದಲ್ಲಿ ನೀಡಲಾಯಿತು.

ಪ್ರತಿಭಾ ಪುರಸ್ಕಾರ
ಕಾರ್ಯಕ್ರಮದಲ್ಲಿ ಮಂಗಳೂರಿನಲ್ಲಿ ಫಾರ್ಮಸಿ ವ್ಯಾಸಂಗ ಮಾಡುತ್ತಿರುವ ಧನಲಕ್ಷ್ಮೀ ಕಾಪಿನಡ್ಕ ಹಾಗೂ ಚಾರ್ಟಡ್ ಅಕೆಂಟ್ ಕಲಿಯುತ್ತಿರುವ ಮೇಘನಾ ಭಟ್ ಬಳಂಜರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೂ ಕೊರೊನಾ ಸಂದರ್ಭ ಕೊರೊನಾ ವಾರಿಯರ್‍ಸ್‌ಯಾಗಿ ದುಡಿದ ಆಶಾಕಾರ್ಯತೆಯರಾದ ರೇವತಿ, ಹಾಗೂ ಗುಲಾಬಿರವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ವೈದ್ಯಕೀಯ ನೆರವು
ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿರುವ ಚೆನ್ನಪ್ಪ ನಾಯ್ಕ ತೆಂಕಕಾರಂದೂರು ಹಾಗೂ ಸಂಜೀವ ಮೂಲ್ಯ ತೆಂಕಕಾರಂದೂರು ಅವರು ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ರಮಾನಾಥ ರೈ, ನಿರ್ದೇಶಕರುಗಳಾದ ತಿಮ್ಮಪ್ಪ ಪೂಜಾರಿ, ವಿಶ್ವನಾಥ, ನಾರಾಯಣ ಪೂಜಾರಿ, ಕೆ ಶರತ್ ಕುಮಾರ್, ಪ್ರದೀಪ್ ಕುಮಾರ್, ಗಿರೀಶ್ ನಾಕ, ಶೇಖರ, ಲಲಿತಾ, ಲೋಕಮ್ಮ, ಸಿಬ್ಬಂದಿ ಪ್ರಶಾಂತ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ವಿದ್ಯಾನಂದ ಸ್ವಾಗತಿಸಿ, ನಿರ್ದೇಶಕ ರೈಮಂಡ್ ವೇಗಸ್ ವಂದಿಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.