ಸ್ವಾವಲಂಬನೆಯಿಂದ ಆತ್ಮನಿರ್ಭರ ಭಾರತ ನಿರ್ಮಾಣ ಸಾಧ್ಯ: ಡಾ| ಪ್ರಭಾಕರ ಭಟ್
ವೇಣೂರು: ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ಸಹಕಾರ ಭಾರತಿ ದ.ಕ. ಜಿಲ್ಲೆ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ನ ಸಹಯೋಗದಲ್ಲಿ ವೇಣೂರು, ಅಳದಂಗಡಿ, ನಾರಾವಿ ಹಾಗೂ ಸುಲ್ಕೇರಿಮೊಗ್ರು ಪ್ರಾ.ಕೃ.ಪ.ಸ. ಸಂಘಗಳ ನೇತೃತ್ವದಲ್ಲಿ ವೇಣೂರು ವಿದ್ಯೋದಯ ಶಾಲೆಯ ವಠಾರದಲ್ಲಿ ಜರಗಿದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮವು ಜರಗಿತು.
ಪ್ರಮುಖ ಭಾಷಣಕಾರರಾಗಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಭಾರತ ಆರ್ಥಿಕವಾಗಿ ಸದೃಢವಾಗಲು ಗ್ರಾಮಮಟ್ಟದಲ್ಲಿ ಪರಿವರ್ತನೆಯಾಗಬೇಕು. ಸ್ವಾವಲಂಬನೆಯಿಂದ ಆತ್ಮನಿರ್ಭರ ಭಾರತ ನಿರ್ಮಾಣ ಸಾಧ್ಯ. ಪ್ರತಿಯೊಬ್ಬರು ಮಾಡುವ ವೃತ್ತಿಯಲ್ಲಿ ಉತ್ತಮ ಕೌಶಲ್ಯವನ್ನು ಬೆಳೆಸಿಕೊಂಡು ಪ್ರಾಮಾಣಿಕವಾಗಿ ದುಡಿದರೆ ದೇಶಕ್ಕೆ ಮಾಡುವ ದೊಡ್ಡ ಸೇವೆ ಎಂದರು.
ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಕೊಂಪದವು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಸಂಘಚಾಲಕ ರಘುನಂದನ್ ಗರ್ಡಾಡಿ, ವೇಣೂರು ವಿದ್ಯೋದಯ ಶಿಕ್ಷಣ ಸಂಸ್ಥೆಯ ಸಂಚಾಲಕ ಕೆ. ಶಿವರಾಮ ಹೆಗ್ಡೆ, ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಸಾಮಾನಿ, ಸುಭ್ರಾಯ ನಂದೋಡಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಹಕಾರ ಭಾರತಿ ತಾಲೂಕು ಅಧ್ಯಕ್ಷ ಸುಂದರ ಹೆಗ್ಡೆ ಬಿಇ ಪ್ರಾಸ್ತಾವಿಸಿ, ಸ್ವಾಗತಿಸಿದರು. ಗಿರೀಶ್ ಕುಲಾಲ್ ನಿರೂಪಿಸಿ, ಶಿಬಿರದ ಪ್ರಧಾನ ಸಂಚಾಲಕ ಪ್ರತೀಶ ಪೂಜಾರಿ ಹೊಸಂಗಡಿ ವಂದಿಸಿದರು.