ಮಡಂತ್ಯಾರು ಸಮನ್ವಯ.ವಿ ಕೋ.ಆಪರೇಟಿವ್ ಸೊಸೈಟಿಯ ಮಹಾಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು: ಸಮನ್ವಯ ವಿವಿಧೋದ್ದೇಶ ಕೋ ಆಪರೇಟಿವ್ ಸೊಸೈಟಿಯ 2019-20ನೇ ಸಾಲಿನ ಮಹಾಸಭೆಯು  ಸಮನ್ವಯ ಸಭಾಂಗಣದಲ್ಲಿ ನಡೆಯಿತು.
ಸೊಸೈಟಿಯ ಅಧ್ಯಕ್ಷ ಮ್ಯಾಕ್ಸಿಂ ಕಾರ್ಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದಸ್ಯರ, ಗ್ರಾಹಕರ, ಹಿತೈಷಿಗಳ ಸಹಕಾರ ಮತ್ತು ಪ್ರೋತ್ಸಾಹ ಹಾಗೂ ಮಾರ್ಗದರ್ಶನದೊಂದಿಗೆ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ಸಂಸ್ಥೆಯಲ್ಲಿ ಒಟ್ಟು 1672 ಸದಸ್ಯರಿದ್ದು, ಅಡಮಾನ ಸಾಲ, ವೈಯಕ್ತಿಕ ಸಾಲ, ವಾಹನ ಸಾಲ, ಚಿನ್ನಾಭರಣ ಸಾಲ, ಗೃಹಸಾಲ, ಗೃಹಬಳಕೆ ವಸ್ತು ಖರೀದಿ ಸಾಲ ನೀಡಿ ಮತ್ತು ಅಭಿವೃದ್ಧಿಶೀಲ ಯೋಜನೆಗಳನ್ನು ರೂಪಿಸಿ ಸಂಸ್ಥೆಯು ಸೇವಾ ಹಾಗೂ ಸಹಕಾರ ಮನೋಭಾವದಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಮತ್ತು ಮೂರ್ಜೆ ಶಾಖೆಯು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಅದರ ಖರೀದಿ ಖರ್ಚಿನ ಹೊರತಾಗಿಯೂ ಸದಸ್ಯರಿಗೆ 18% ಡಿವಿಡೆಂಡ್ ಘೋಷಿಸಿದರು.
ಮುಖ್ಯ ಕಾಯನಿರ್ವಹಣಾಧಿಕಾರಿ ಜೋನ್ ಎಂ ಡಿ’ಸೋಜಾ ಆಯವ್ಯಯ ವಿವರ ನೀಡಿದರು. ನಿರ್ದೇಶಕರಾದ ಜುಲಿಯಾನ ರೀಟಾ, ಜೆ.ಆರ್ ಡಿ’ಸೋಜ, ವಲೇರಿಯನ್ ಸೆರಾವೊ, ಸಿಲ್ವೆಸ್ಟರ್ ಪಿಂಟೊ, ವಲೇರಿಯನ್ ವಿಕ್ಟರ್, ವಿನ್ಸೆಂಟ್ ಡಿ’ಸೋಜ, ಮಾರ್ಸೆಲ್ ಡಿ’ಸೋಜ ಹಾಗೂ ಜೆನೆವಿವ್ ರೊಡ್ರಿಗಸ್ ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನ ಹೊಂದಿದ ಸೊಸೈಟಿಯ ಸದಸ್ಯರಾದ ಮಾಗ್ದೆಲಿನ್ ಫ್ರಾಂಕ್, ಲೂಸಿ ಕಾರ್ಲ್, ಸಿಸ್ರಿಯನ್ ಮೆಂಡೊನ್ಸಾ, ಅಬ್ಬಾಸ್ ಗಂಪದಡ್ಡ, ರೊನಾಲ್ಡ್ ಮಾಡ್ತ್ತ ಮತ್ತು ಅಂತೋನಿ ಡಿ’ಸೋಜ ಇವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಉಪಾಧ್ಯಕ್ಷೆ ಜುಲಿಯಾನಾ ರೀಟಾ ಅಂದ್ರಾದೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.