ರೂ. 2.98 ಕೋಟಿ ವ್ಯವಹಾರ; ರೂ 14.56 ಲಕ್ಷ ಲಾಭ; ಶೇ.25% ಡಿವಿಡೆಂಟ್
ಮದ್ದಡ್ಕ: ಸಮೃದ್ಧಿ ಮದ್ದಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ.8ರಂದು ಗುರುವಾಯನಕೆರೆ ಶಾಖಾ ವಠಾರ (ಕುಲಾಲ ಮಂದಿರದ ಹತ್ತಿರ) ಆವರಣದಲ್ಲಿ ಜರುಗಿತು. ಸಂಘದ ಅಧ್ಯಕ್ಷ ಗೋಪಾಲ ಶೆಟ್ಟಿ ಕೋರ್ಯಾರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವರ್ಷವೂ ಸಂಘವು ರೂ.2.98 ಕೋಟಿ ವ್ಯವಹಾರ ನಡೆಸಿದ್ದು ರೂ. 14.56ಲಕ್ಷ ಲಾಭ ಗಳಿಸಿದೆ. ಶೇ 25% ನೀಡುವುದಾಗಿ ಘೋಷಿಸಿದರು.
ರಬ್ಬರ್ ಮ್ಯಾಟ್ ಖರೀದಿಗೆ 1 ಮ್ಯಾಟ್ಗೆ ಶೇ.50 ರಂತೆ ತಲಾ ಎರಡು ಮ್ಯಾಟ್ಗೆ ಸಬ್ಸಿಡಿ ನೀಡಲಾಗುವುದು. ರಾಸು ಆಕಸ್ಮಿಕ ಮರಣ ಹೊಂದಿದರೆ ವಿಮೆ ನೀಡಲಾಗುವುದು. ಸಂಘದ ಓರ್ವ ಸಕ್ರಿಯ ಸದಸ್ಯರು ಮರಣ ಹೊಂದಿದ್ದು ಅವರ ಮನೆಯವರಿಗೆ ರೂ.5000 ಸಹಾಯ ಧನ ನೀಡಲಾಗಿದೆ. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ತಲಾ. ರೂ.2000ದಂತೆ 9 ವಿದ್ಯಾರ್ಥಿಗಳಿಗೆ ನೀಡಲಾಗಿದೆ ಹಾಗೂ ಸಂಘವು ಸತತ 4ನೇ ಬಾರಿಗೆ ‘ಎ’ ಶ್ರೇಣಿ ಪಡೆದಿದೆ. ಜಂತುಹುಳು ಔಷಧ ಉಚಿತವಾಗಿ ನೀಡಿದ್ದು, ಕರುಗಳಿಗೆ ಪಶು ಆಹಾರ ಶೇ.25% ರಿಯಾಯಿತಿ ನೀಡುತ್ತಿದ್ದೇವೆ ಎಂದರು.
ಸಭೆಯಲ್ಲಿ ವಿಸ್ತರಣಾಧಿಕಾರಿ ಸುಚಿತ್ರ, ಬೆಳ್ತಂಗಡಿ ಪಶು ವೈದ್ಯಾಧಿಕಾರಿ ಡಾ| ರವಿ ಕುಮಾರ್ ಮಾಹಿತಿ ನೀಡಿದರು. ಆಡಳಿತ ಮಂಡಳಿ ನಿರ್ದೇಶಕರಾದ ಕೃಷ್ಣಪ್ಪ ಪೂಜಾರಿ, ಅಣ್ಣಿ ಶೆಟ್ಟಿ, ರಮೇಶ್ ಪೂಜಾರಿ, ಶ್ರೀಮತಿ ವಿನೋದ ಶೆಟ್ಟಿ, ಶ್ರೀಮತಿ ಭಾರತಿ ಹೇಮಂತ್ ಶೆಟ್ಟಿ, ರೊನಾಲ್ಡ್ ಸಿಕ್ವೇರಾ, ವಿವೇಕಾನಂದ ಸಾಲ್ಯಾನ್, ಮೋಹನ್ ನಾಕ್, ಶ್ರೀಮತಿ ಗಿರಿಜಾ, ಶಾಖಾ ನಿರ್ವಾಹಕ ಮತ್ತು ಕೃ.ಗ ಕಾರ್ಯಕರ್ತ ಗಣೇಶ್ ಎಂ., ಬಿ.ಎಮ್..ಸಿ ನಿರ್ವಾಹಕ, ಸಹಾಯಕ ನಿರ್ವಾಹಕಿ ಶ್ರೀಮತಿ ಮೀನಾಕ್ಷಿ, ಶ್ರೀಮತಿ ಶೋಭ, ಶಾಖಾ ಹಾಲು ಪರೀಕ್ಷಕ ನಿರಂಜನ್, ಹಾಲು ಪರೀಕ್ಷಾ ಸಹಾಯಕ ಪ್ರಶಾಂತ್ ಕೆ. ಉಪಸ್ಥಿತರಿದ್ದರು.
ಸಂಘದ ನಿರ್ದೇಶಕ ಚಿದಾನಂದ ಸ್ವಾಗತಿಸಿದರು. ಕಾರ್ಯದರ್ಶಿ ಪವಿತ್ರಾ ವರದಿ ವಾಚಿಸಿ, ಉಪಾಧ್ಯಕ್ಷ ಪೂವಪ್ಪ ಭಂಡಾರಿ ಧನ್ಯವಾದವಿತ್ತರು.