ಬೆಳ್ತಂಗಡಿ: ಇಲ್ಲಿನ ಐಬಿ ರಸ್ತೆ ಮಂಜು ಭಾರತಿ ಆರ್ಕೇಡ್ನಲ್ಲಿ ನೂತನವಾಗಿ ಪ್ರಾರಂಭಿಸಿದ ಸುಶ್ರುತ ಮೆಡಿಕಲ್ಸ್ ಇದರ ಶುಭಾರಂಭವು ಡಿ.9ರಂದು ನಡೆಯಿತು.
ಬೆಳ್ತಂಗಡಿ ಹಿರಿಯ ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ ದೀಪ ಬೆಳಗಿಸಿ ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭಕೋರಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಬಿ. ಪಾಂಡುರಂಗ ಬಾಳಿಗಾ, ಮಕ್ಕಳ ತಜ್ಞೆ ಡಾ| ಪ್ರತ್ಯುಷ ಹಾಗೂ ಇತರರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕಿ ಶ್ರೀಮತಿ ಅನ್ನಪೂರ್ಣ ಆಗಮಿಸಿದ ಅತಿಥಿ ಗಣ್ಯರನ್ನು ಬಂಧು -ಮಿತ್ರರನ್ನು ಸ್ವಾಗತಿಸಿ, ಸತ್ಕರಿಸಿದರು.