ಹತ್ಯಡ್ಕ: ರಬ್ಬರ್ ಟ್ಯಾಪಿಂಗ್ ತರಬೇತಿ ಶಿಬಿರ ಉದ್ಘಾಟನೆ

ಹತ್ಯಡ್ಕ: ರೋಟರಿ ಕ್ಲಬ್ ಬೆಳ್ತಂಗಡಿ, ರಬ್ಬರ್ ಮಂಡಳಿ ಪ್ರಾದೇಶಿಕ ಕಛೇರಿ ಮಂಗಳೂರು, ರಬ್ಬರ್ ಬೆಳೆಗಾರರ ಮಾರಾಟ ಹಾಗೂ ಸಂಸ್ಕರಣಾ ಸಹಕಾರಿ ಸಂಘ(ನಿ) ಉಜಿರೆ, ಹತ್ಯಡ್ಕ ಸಹಕಾರಿ ಸಂಘ ಇವುಗಳ ಆಶ್ರಯದಲ್ಲಿ 8 ದಿನಗಳ ರಬ್ಬರ್ ಟ್ಯಾಪಿಂಗ್ ತರಬೇತಿ ಶಿಬಿರದ ಉದ್ಘಾಟನೆ ಡಿ.8 ರಂದು ಹತ್ಯಡ್ಕ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು
ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ. ಭಿಡೆ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಪ್ರಾದೇಶಿಕ ರಬ್ಬರ್ ಬೊರ್ಡ್‌ನ ಬಾಲಕೃಷ್ಣ ಎಸ್, ಹತ್ಯಡ್ಕ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ಉಪಾಧ್ಯಕ್ಷ ರಾಜು ಕೆ ಸಾಲ್ಯಾನ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ. ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ ಕೆ.ವಿ ಹಾಗೂ ಉದಯಶಂಕರ್, ರಬ್ಬರ್ ಸೊಸೈಟಿ ನಿರ್ದೇಶಕ ವಿ.ವಿ ಅಬ್ರಹಾಂ ಕಡ್ತಿಮಾರ್, ಹತ್ಯಡ್ಕ ಸಹಕಾರಿ ಸಂಘದ ನಿರ್ದೇಶಕರಾದ ಮುರಳೀಧರ ಶೆಟ್ಟಿಗಾರ್, ಶ್ರೀಮತಿ ಬೇಬಿ, ಕೊರಗಪ್ಪ ಗೌಡ, ಮತ್ತಿತರರು ಉಪಸ್ಥಿತರಿದ್ದರು.
ಶಿಬಿರದ ಸಂಯೋಜಕ ಸುಧೀರ್ ಕುಮಾರ್ ಎಂ ಎಸ್, ಸ್ವಾಗತಿಸಿ, ಹತ್ಯಡ್ಕ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತ್ಯಾಂಪಣ್ಣ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ರತೀಶ್ ಬಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.