ಪಟ್ರಮೆ: ಪಟ್ರಮೆ ಗ್ರಾಮ ಪಂಚಾಯತದ ಗುಮಾಸ್ತೆಯಾಗಿದ್ದು, ಇತ್ತೀಚೆಗೆ ನಿಧನರಾದ ರಜನಿ ಯವರ ಇಬ್ಬರು ಮಕ್ಕಳಿಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃಧ್ದಿ ಸಂಘ (ಆರ್.ಡಿ.ಪಿ.ಆರ್) ದಿಂದ ರೂ.1 ಲಕ್ಷ ಮೌಲ್ಯದ ಅಂಚೆ ಇಲಾಖೆಯ ಕಿಸಾನ್ ವಿಕಾಸ ಪತ್ರವನ್ನು ಹಸ್ತಾಂತರಿಸಲಾಯಿತು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃಧ್ದಿ ಸಂಘ (ಆರ್.ಡಿ.ಪಿ.ಆರ್) ಪದಾಧಿಕಾರಿಗಳು ಮತ್ತು ಸದಸ್ಯರು ರಜನಿಯವರ ಮನೆಗೆ ಭೇಟಿ ನೀಡಿ, ರಜನಿಯವರ ಪುತ್ರಿ ತನ್ವಿ ಹಾಗೂ ಪುತ್ರ ಸನ್ವಿತ್ ರವರ ಹೆಸರಿನಲ್ಲಿ ಠೇವಣಿ ಇಟ್ಟ ತಲಾ ರೂ 50ಸಾವಿರ ಮೌಲ್ಯದ ಅಂಚೆ ಇಲಾಖೆಯ ಕಿಸಾನ್ ವಿಕಾಸ ಪತ್ರವನ್ನು ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ಸತೀಶ್ ನಾರಾವಿ ಇವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಆರ್.ಡಿ.ಪಿ.ಆರ್ ರಾಜ್ಯಾಧ್ಯಕ್ಷ ಡಾ. ದೇವಿಪ್ರಸಾದ್ ಬೊಳ್ಮ, ದ.ಕ ಜಿಲ್ಲಾ ಸಮಿತಿ ಸಂಘಟನಾ ಕಾರ್ಯದರ್ಶಿ ಉಮೇಶ್ ಉಜಿರೆ, ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ರುಕೇಶ್ ಕಲ್ಮಂಜ, ತಾಲೂಕು ಉಸ್ತುವಾರಿ ಪ್ರಶಾಂತ್ ಕುಕ್ಕೇಡಿ, ಪಟ್ರಮೆ ಗ್ರಾ.ಪಂ.ಸಿಬ್ಬಂದಿ ಪ್ರಸನ್ನ , ರಜನಿಯವರ ಪತಿ ಮಲವಂತಿಗೆ ಗ್ರಾ.ಪಂ. ಸಿಬ್ಬಂದಿ ಪೂವಪ್ಪ, ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.