ಸೋಮಾವತಿ ನದಿಯಲ್ಲಿ  ಮುಳುಗಿದ  ಉಜಿರೆ ನಿವಾಸಿ ರಮೇಶ್ ಶವ ಪತ್ತೆ

 

  

ಬೆಳ್ತಂಗಡಿ: ಇಲ್ಲಿಯ ಪಂಪು ಹೌಸ್ ಬಳಿಯ ಸೋಮಾವತಿ ನದಿಯಲ್ಲಿ  ಮುಳುಗಿ ನಾಪತ್ತೆಯಾದ ಉಜಿರೆ ಗ್ರಾಮದ ಶಿವಾಜಿ ನಗರ ರೆಂಜಳ ನಿವಾಸಿ ರಮೇಶ್ (48ವ) ಎಂಬವರ  ಶವ ಪತ್ತೆಯಾಗಿದೆ.

ಪಂಪು ಹೌಸ್ ಬಳಿಯ ಸೋಮಾವತಿ ನದಿಯಲ್ಲಿ  ಮುಳುಗಿ ನಾಪತ್ತೆಯಾದ ಬಗ್ಗೆ ಹಾಗೂ ನದಿ ದಡದಲ್ಲಿ  ಡ್ರೆಸ್ ಪತ್ತೆಯಾದ ಹಿನ್ನಲೆಯಲ್ಲಿ ಅಗ್ನಿ ಶಾಮಕದಳ ಮತ್ತು ಈಜು ತಜ್ಞರು ಹುಡುಕಾಟ ನಡೆಸಿದ್ದು ರಮೇಶ್ ರವರ ಮೃತದೇಹ ಪತ್ತೆಯಾಗಿದೆ.

ನದಿಯಲ್ಲಿ ಮೀನು ಹಿಡಿಯಲು ಬಂದವರು ನೀರಿನಲ್ಲಿ ಮುಳುಗಿರಬಹುದೆಂಬ ಹೇಳಲಾಗುತ್ತಿದ್ದು, ರಮೇಶ್ ರವರ ಮೊಬೈಲ್ ಪೋನ್ ಇಂದು ಬೆಳಗ್ಗೆ 10 ಗಂಟೆ ಬಳಿಕ ಸ್ವಿಚ್ಢ್ ಆಪ್ ಆಗಿತ್ತು ಎಂದು ಅವರ ಸಹೋದರ ತಿಳಿಸಿದ್ದಾರೆ.

ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸಾರ್ವಜನಿಕ  ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.

ರಮೇಶ್ ರವರ ಜೊತೆಗೆ ಮೀನು ಹಿಡಿಯಲು  ಬಂದಿದ್ದ ಉಜಿರೆ ಓಡಲ ನಿವಾಸಿ ಸುಂದರ ಶೆಟ್ಟಿ ಯವರನ್ನು ಸಿಸಿ ಕ್ಯಾಮರಾ ಆಧಾರದಲ್ಲಿ ಪೊಲೀಸರು ವಶಕ್ಕೆ ಪಡೆದು, ತನಿಖೆ  ಮುಂದುವರೆಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.