ಬೆಳ್ತಂಗಡಿ: ಇಲ್ಲಿಯ ಪಂಪು ಹೌಸ್ ಬಳಿಯ ಸೋಮಾವತಿ ನದಿಯಲ್ಲಿ ಓರ್ವ ಮುಳುಗಿ ನಾಪತ್ತೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ನದಿ ದಡದಲ್ಲಿ ಡ್ರೆಸ್ ಪತ್ತೆಯಾದ ಹಿನ್ನಲೆಯಲ್ಲಿ ಅಗ್ನಿ ಶಾಮಕದಳ ಮತ್ತು ಈಜು ತಜ್ಞರು ಹುಡುಕಾಟ ನಡೆಸುತ್ತಿದ್ದಾರೆ.
ನದಿ ತಟದಲ್ಲಿ ಓರ್ವನ ಡ್ರೆಸ್ ಪತ್ತೆಯಾಗಿದ್ದು, ನದಿಯಲ್ಲಿ ಮೀನು ಹಿಡಿಯಲು ಬಂದವರು ನೀರಿನಲ್ಲಿ ಮುಳುಗಿರಬಹುದೆಂಬ ಹೇಳಲಾಗುತ್ತಿದೆ. ಉಜಿರೆ ಗ್ರಾಮದ ಶಿವಾಜಿ ನಗರ ರೆಂಜಳ ನಿವಾಸಿ ರಮೇಶ್ (48ವ) ಎಂಬವರ ಡಿ.7ಸಂಜೆಯಯಿಂದ ನಾಪತ್ತೆಯಾಗಿದ್ದು, ಅವರ ಮೊಬೈಲ್ ಪೋನ್ ಇಂದು ಬೆಳಗ್ಗೆ 10 ಗಂಟೆ ಬಳಿಕ ಸ್ವಿಚ್ಢ್ ಆಪ್ ಆಗಿತ್ತು ಎಂದು ಅವರ ಸಹೋದರ ತಿಳಿಸಿದ್ದಾರೆ. ನದಿ ಬದಿಯಲ್ಲಿ ಡ್ರೆಸ್ ಮತ್ತು ಮೀನು ಹಿಡಿಯುವ ಬಲೆ, ಮೊಬೈಲ್ ಪತ್ತೆಯಾಗಿದೆ. ಅಗ್ನಿ ಶಾಮಕ ದಳ ಮತ್ತು ಮುಳುಗು ತಜ್ಞ ಇಸ್ಮಾಯಿಲ್ ಸಂಜಯನಗರ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.