ಶಿಬಾಜೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮಾಧವ ಗೌಡ ಖಂಡಿಗ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಶಿಬಾಜೆ: ಶಿಬಾಜೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮಾಧವ ಗೌಡ ಕಂಡಿಗ ರವರು ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಡಿ.8 ರಂದು ರಾಜೀನಾಮೆ ನೀಡಿದ್ದಾರೆ.
“ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತನಾಗಿರುವ ನಾನು ಇತರ ಹಿಂದೂ ಸಂಘಟನೆಗಳ ಹತ್ತಿರದ ಸಂಪರ್ಕ ಹೊಂದಿದ್ದು, ನನ್ನ ಬಾಲ್ಯದಿಂದಲೇ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ, ಸಹಕಾರಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಕಳೆದ 13 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಹೊಂದಿದ್ದು, 2014-15ನೇ ಸಾಲಿನಲ್ಲಿ ಗ್ರಾ.ಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಬಹು ಮತಗಳಿಂದ ಚುನಾಯಿತನಾಗಿದ್ದು, ಒಂದು ವರ್ಷ ಗ್ರಾ.ಪಂ. ಸದಸ್ಯನಾಗಿ ತದನಂತರ ಗಾ.ಪಂ. ಉಪಾಧ್ಯಕ್ಷನಾಗಿ ಕೆಲಸ ಮಾಡಿರುತ್ತೇನೆ.
ಬಿಜೆಪಿಯಲ್ಲಿ ನನ್ನ ಆತ್ಮಸಾಕ್ಷಿಗೆ ಸರಿಯಾಗಿ ಜನರ ಕೆಲಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮನನೊಂದು ನಾನು ಚುನಾಯಿಸಿದ ಜನತೆ ಮತ್ತು ನನ್ನ ಧ್ಯೇಯ ಧೋರಣೆಗಳೊಂದಿಗೆ ಬೆಂಬಲಿತವಾಗಿರುವ ದೇವ ದುರ್ಲಭ ಕಾರ್ಯಕರ್ತರ ಒತ್ತಾಯದ ಮೇರೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು  ಬಿಜೆಪಿ ಮಂಡಲ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ತಿಳಿಸದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.