ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ಗಾಂಜಾ ಸಾಗಾಟ ವಾಹನ ಸೆರೆ

 

ಬೆಳ್ತಂಗಡಿ: ದ್ವಿ ಚಕ್ರ ವಾಹನದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳ ಎಲೆ ಮೊಗ್ಗುಗಳು, ಬೀಜಗಳನ್ನು ಸಾಗಿಸುತ್ತಿದ್ದ ಪ್ರಕರಣ ವನ್ನು ಪತ್ತೆ ಹಚ್ಚಿ ದ ಧಮ೯ಸ್ಥಳ ಪೊಲೀಸರು ಓವ೯ನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಘಟನೆ ವರದಿಯಾಗಿದೆ.
ಲಾಯಿಲ ಗ್ರಾಮದ .ಮಹಲ್ ಕಾಶಿ ನಿವಾಸಿ ಮಹಮ್ಮದ್
ನಬಾನ್ ( 18 ವರ್ಷ) ಬಂಧಿತ ಆರೋಪಿ ಯಾಗಿದ್ದಾರೆ.
ಉಜಿರೆ ಗಾಂಧಿನಗರ ನಿವಾಸಿ ಅಬ್ದುಲ್ ನಾಜಿರ್ ( 22 ವರ್ಷ) ಪೊಲೀಸ್ ದಾಳಿಯ ವೇಳೆ ಪರಾರಿಯಾದ ಆರೋಪಿ. ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಪವನ್ ನಾಯಕ್ ಹಾಗೂ ಸಿಬ್ಬಂದಿಗಳು ಚಾರ್ಮಾಡಿ ಗ್ರಾಮದ ಚಾರ್ಮಾಡಿ ಪೊಲೀಸ್ ಚೆಕ್ ಪೊಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತೀರುವ ಸಮಯ
ಉಜಿರೆ ಕಡೆಯಿಂದ ನೊಂದಣಿಯಾಗದ ಹೊಂಡಾ ಕಂಪನಿಯ ಡಿಯೊ ಮಾದರಿಯ ಮೋಟಾರ್ ಸೈಕಲ್ ಬರುತ್ತಿರುವುದನ್ನು ಕಂಡು ಪಿ ಎಸ್ ಐ ಹಾಗೂ ಸಿಬ್ಬಂದಿಗಳು ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಸಮವಸ್ತ್ರ
ದಲ್ಲಿದ್ದ ಪೊಲೀಸ್ ರನ್ನು
ಕಂಡು ಆರೋಪಿತರು ತನ್ನ ದ್ವಿ ಚಕ್ರ ವಾಹನವನ್ನು ಹಿಂದಕ್ಕೆ ತಿರುಗಿಸಿತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಸವಾರ ಮಹಮ್ಮದ್ ನಬಾನ್ ನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರೆ, ಸಹ ಸವಾರ ಅಬ್ದುಲ್ ನಾಜಿರ್ ಓಡಿ ತಪ್ಪಿಸಿಕೊಂಡನೆನ್ನಲಾಗಿದೆ.ದ್ವಿ ಚಕ್ರ ವಾಹನವನ್ನು ಪರಿಶೀಲಿಸಲಾಗಿ ಸುಮಾರು 450 ಗ್ರಾಂ ತೂಕದ ಗಾಂಜ ಗಿಡಗಳ ಎಲೆ ಮೊಗ್ಗುಗಳು , ಬೀಜಗಳು ಪತ್ತೆ ಯಾಗಿದ್ಧು, ಸದ್ರಿ ಗಾಂಜಾದ ಅಂದಾಜು ಮೌಲ್ಯ 10000/- ರೂ
ಹಾಗೂ ದ್ವಿ ಚಕ್ರ ವಾಹನದ ಅಂದಾಜು ಮೌಲ್ಯ 50000/- ರೂ ಆಗಬಹುದು ಎಂದು ಅಂದಾಜಿಸಲಾಗಿದೆ.
ಧಮ೯ಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.