ಓಡಿಲ್ನಾಳ: ಇಲ್ಲಿಯ ಮೈರಲ್ಕೆ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರರ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭವು ಡಿ.6 ರಂದು ಜರುಗಿತು. ಉದ್ಯಮಿ ವೈ ನಾಣ್ಯಪ್ಪ ಪೂಜಾರಿಯವರು ವಿಜ್ಞಾಪನ ಪತ್ರ ಬಿಡುಗಡೆ ಮಾಡಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಕೊಯ್ಯೂರಿನ ನಂದ ಕುಮಾರ್ ತಂತ್ರಿ ಮಾತನಾಡಿ, ಕಿರಾತಮೂರ್ತಿ ದೇವರ ಸ್ವರೂಪ ಮೈರಲ್ಕೆ ಕ್ಷೇತ್ರದಲ್ಲಿ ಅನುಗ್ರಹ ಪ್ರಾಯವಾಗಲಿ. ಮುಂದಿನ ದಿನಗಳಲ್ಲಿ ಕಿರಾತ ಮೂರ್ತಿ ದೇವಸ್ಥಾನ ನಿರ್ಮಾಣ ಮಾಡುವಲ್ಲಿ ಗ್ರಾಮಸ್ಥರಿಗೆ ದೇವರು ಅನುಗ್ರಹ ಕರುಣಿಸಲಿ ಎಂದು ಆಶೀರ್ವಚನ ನೀಡಿದರು.
ಮಾಜಿ ಶಾಸಕ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ ವಸಂತ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಕಾರ್ಯಧ್ಯಕ್ಷ ಜಯರಾಮ್ ಶೆಟ್ಟಿ ಪಡಂಗಡಿ ದೇವಸ್ಥಾನದ ಜೀರ್ಣೋದಾರದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಓಡಿಲ್ನಾಳ ಧರ್ಮೋತ್ಥಾನ ಟ್ರಸ್ಟ್ ಅಧ್ಯಕ್ಷ ವ್ರಷಭ ಆರಿಗ ಪರಾರಿ ಗುತ್ತು, ಉಪಾಧ್ಯಕ್ಷ ಗಂಗಾಧರ್ ರಾವ್ ಕೆವುಡೇಲು, ಪವಿತ್ರ ಪಾಣಿ ಮೋಹನ್ ಕೆರ್ಮುಣ್ಣಾಯ ಮೈರಾರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ರಾಜು ಶೆಟ್ಟಿ ಬೆಂಗತ್ಯಾರು. ಕೋಶಾಧಿಕಾರಿ ಗೋಪಾಲ ಶೆಟ್ಟಿ ಕೋರ್ಯಾರು, ತಾಂತ್ರಿಕ ಸಲಹೆಗಾರ ನಾರಾಯಣ ಭಟ್ ನಡುಮನೆ, ದೇವಸ್ಥಾನದ ಅರ್ಚಕ ಅನಂತ ಎಸ್ ಇರ್ವತ್ರಾಯ ತಂಗೋಯಿ, ಹರಿಪ್ರಸಾದ್ ಇರ್ವತ್ರಾಯ ತಂಗೋಯಿ, ತಾ ಪಂ ಸದಸ್ಯ ಗೋಪಿನಾಥ್ ನಾಯಕ್ ಗುರುವಾಯನಕೆರೆ, ಟ್ರಸ್ಟಿಗಳಾದ ಸತೀಶ್ ಶೆಟ್ಟಿ ಮೈರಲ್ಕೆ, ದಿನೇಶ್ ಮೂಲ್ಯ ಕೊಂಡೆಮಾರು, ವಿನೋದ ಕೆ ಶೆಟ್ಟಿ ಮೂಡಾಯಿಲು, ಪುಷ್ಪಾವತಿ ಶೆಟ್ಟಿ, ವೆಂಕಪ್ಪಗೌಡ, ಸತೀಶ್, ಮಾಲಾಡಿ ಗ್ರಾಮ ಪಂ ಮಾಜಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ತಣ್ಣೀರುಪಂತ ಗ್ರಾ.ಪಂ ಮಾಜಿ ಅಧ್ಯಕ್ಷ ಜಯವಿಕ್ರಮ ತಣ್ಣೀರುಪಂತ, ಮಹಾವೀರ ಆರಿಗ ಪರಾರಿ ಗುತ್ತು, ದಾಮೋದರ್ ಪೂಜಾರಿ ಸಬರಬೈಲು, ಜಯ ನಾರಾಯಣ ಉಪಾಧ್ಯಾಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ದಿನೇಶ್ ಉಪಸ್ಥಿತರಿದ್ದರು. ಜೀರ್ಣೋಧ್ಧಾರ ಸಮಿತಿಯ ಪಧಾದಿಕಾರಿಗಳು, ಸರ್ವಸದಸ್ಯರು,ಬೈಲು ಸಮಿತಿ ಸಂಚಾಲಕರು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.
ಸುಷ್ಮಾ ಮೈರಾರು ಪ್ರಾರ್ಥಿಸಿ, ಓಡಿಲ್ನಾಳ ಧರ್ಮೋತ್ಥಾನ ಟ್ರಸ್ಟ್ ನ ಅಧ್ಯಕ್ಷ ವ್ರಷಭ ಆರಿಗ ಪರಾರಿ ಗುತ್ತು ಸ್ವಾಗತಿಸಿ, ಸಮಿತಿಯ ಪ್ರದಾನ ಕಾರ್ಯದರ್ಶಿ ಚಂದ್ರಹಾಸ್ ಕೇದೆ ವಂದಿಸಿದರು. ಓಡಿಲ್ನಾಳ ಧರ್ಮೋತ್ಥಾನ ಟ್ರಸ್ಟ್ನ ಸದಸ್ಯ ಶಾಂತಿರಾಜ ಜೈನ್ ಕಾರ್ಯಕ್ರಮ ನಿರೂಪಿಸಿದರು.