ಪಾಂಗಳ ಶ್ರೀ ಚಾಮುಂಡೇಶ್ವರಿ ಪರಿವಾರ ದೈವಸ್ಥಾನ : ಆಮಂತ್ರಣ ಪತ್ರಿಕೆ ಬಿಡುಗಡೆ

ಧರ್ಮಸ್ಥಳ: ಇಲ್ಲಿಯ ಪಾಂಗಾಳ ಶ್ರೀ ಚಾಮುಂಡೇಶ್ವರಿ ಪರಿವಾರ ದೈವಸ್ಥಾನ  ಇದರ ನವೀಕೃತ ಶಿಲಾಮಯ ದೈವಸ್ಥಾನದ ಪ್ರತಿಷ್ಠಾಪನಾ ಕಾರ್ಯಕ್ರಮವು ಜ.6ರಿಂದ 12 ರವರೆಗೆ   ಬ್ರಹ್ಮಶ್ರೀ ರವಿಕುಮಾರ್ ಭಟ್  ಪಜಿರಡ್ಕ ಇವರ ನೇತೃತ್ವದಲ್ಲಿ ಜರುಗಲಿದ್ದು, ಕಾರ್ಯಕ್ರಮದ ಅಮಂತ್ರಣ ಪತ್ರಿಕೆಯನ್ನು ಡಿ.6 ರಂದು ಬಿಡುಗಡೆಗೊಳಿಸಲಾಯಿತು.

ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಹರೀಶ್  ಆರಿಕೋಡಿ  ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಆರಿಕೋಡಿ ಕ್ಷೇತ್ರದ ಮುಖ್ಯಸ್ಥರಾದ ಡೊಂಬಯ್ಯ ಗೌಡ, ಪಾಂಗಳ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಬಾಬು ಗೌಡ ಪಾಂಗಳ, ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮೋಹನ್ ಗೌಡ,  ಸಂಘದ ನಿರ್ದೇಶಕರುಗಳಾದ ಆನಂದ ಗೌಡ, ಕಾಂತಪ್ಪ ಗೌಡ ಮಡಂತ್ಯಾರು, ಬಿರ್ಮೊಟ್ಟು ಬಾಲಕೃಷ್ಣ ಗೌಡ, ವಿಜಯ ಗೌಡ, ಅಧ್ಯಾಪಕ ಪುರಂದರ ಗೌಡ, ಮಹೇಶ್ ಗೌಡ, ಪೂರ್ವಿಕ್ ಗೌಡ ಹಾಗೂ ಪಾಂಗಳ ಮನೆಯ ಕುಟುಂಬಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.