ಬೆಳಾಲು: ಇಲ್ಲಿಯ ಅನಂತೋಡಿ ನಿವಾಸಿ ಬೇಬಿಯವರು ಮಾನಸಿಕ ಅಸ್ವಸ್ಥರಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ ಚಿಕಿತ್ಸಾ ಸಹಾಯಾರ್ಥ ಬೆಳಾಲಿನ ಮಾಯ ಪ್ರೆಂಡ್ಸ್ನ ವತಿಯಿಂದ ರೂ.5000/- ಸಹಾಯಧನವನ್ನು ಅಧ್ಯಕ್ಷ ರಾಧಾಕೃಷ್ಣ ಮಾಯಾ ಇವರು ಸಮಾಜ ಸೇವಕ ಬೆಳಾಲು ಪ್ರಾ.ಕೃಸ. ಸಹಕಾರ ಸಂಘದ ನಿರ್ದೇಶಕ ಸುಲೈಮಾನ್ ಮುಖಾಂತರ ಹಸ್ತಾಂತರಿಸಿದರು.
ಈ ಸಂದರ್ಭಲ್ಲಿ ಮಾಯಾ ಪ್ರೆಂಡ್ಸ್ನ ಪ್ರಧಾನ ಕಾರ್ಯದರ್ಶಿ ಗಣೇಶ್ ಕನಿಕ್ಕಿಲ, ಗ್ರಾ.ಪಂ. ಮಾಜಿ ಸದಸ್ಯ ದಯಾನಂದ ಪಿ. ಉಪಸ್ಥಿತರಿದ್ದರು.