ಬೆಳಾಲು: ಶ್ರೀ ನಾರಾಯಣಗುರು ಸೇವಾ ಸಮಿತಿ ಬೆಳಾಲು ಇದರ ವತಿಯಿಂದ ಡಿ.5 ರಂದು ನಡೆದ ಗುರು ಪೊಜೆಯ ಸಂದರ್ಬದಲ್ಲಿ ಸಂಘದ ವತಿಯಿಂದ ನಿರ್ಮಿಸಲು ಉದ್ಧೇಶಿಸಿರುವ ಗುರು ಮಂದಿರ ಕಟ್ಟಡ ನಿಧಿಗೆ ಸಂಘದ ಮಾಜಿ ಅಧ್ಯಕ್ಷ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಸುವರ್ಣ ರೂ.10 ಸಾವಿರ ದೇಣಿಗೆಯನ್ನು ಸಂಘದ ಅಧ್ಯಕ್ಷ ನಾಣ್ಯಪ್ಪ ಪೂಜಾರಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬೆಳಾಲು ಗ್ರಾ.ಪಂ. ಮಾಜಿ ಅಧ್ಯಕ್ಷ ದಿನೇಶ್ ಕೋಟ್ಯಾನ್, ಗೌರವಾಧ್ಯಕ್ಷ ರಮೇಶ್ ಪೂಜಾರಿ ಗುಂಡ್ಯ, ಮಾಜಿ ಅಧ್ಯಕ್ಷ ಜಾರಪ್ಪ ಪೂಜಾರಿ, ಗ್ರಾ.ಪಂ. ಮಾಜಿ ಸದಸ್ಯ ದಯಾನಂದ ಪಿ, ಪ್ರಗತಿಪರ ಕೃಷಿಕ ದಿನೇಶ್ ಪೂಜಾರಿ ಉಪ್ಪಾರು, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಅವಿನಾಶ್, ಕಾರ್ಯದರ್ಶಿ ಪ್ರವೀಣ, ಸ್ಥಳೀಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಂಗಾಧರ ಸಾಲ್ಯಾನ್, ಸಂಘದ ಪದಾಧಿಕಾರಿಗಳಾದ ಜಗದೀಶ್ ಪೂಜಾರಿ, ಮೋನಪ್ಪ ಪೂಜಾರಿ ಪೂಸೊಟ್ಟು ಮೊದಲಾದವರು ಉಪಸ್ಥಿತರಿದ್ಧರು.