ಬಂದಾರು: ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಬಂದಾರು: ಶಿವ ಫ್ರೆಂಡ್ಸ್ ಕುರಾಯ ಖಂಡಿಗ ಹಾಗೂ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಬೆಳ್ತಂಗಡಿ ಇದರ ಸಹಬಾಗಿತ್ವದಲ್ಲಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಡಿ.6 ರಂದು ಕುರಾಯ ಖಂಡಿಗದಲ್ಲಿ ನಡೆಯಿತು.
ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕವನ್ನು ಪಡೆದ ವಾಲಿಬಾಲ್ ಆಟಗಾರ್ತಿ ಬಂದಾರು ಗ್ರಾಮದ ಕೊಪ್ಪ ರಮೇಶ್ ಹಾಗೂ ರುಕ್ಮಿಣಿ ದಂಪತಿ ಪುತ್ರಿ ಹೇಮಲತಾ ಪಂದ್ಯಾಟವನ್ನು ಉದ್ಘಾಟಿಸಿದರು.
ಸಭಾ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ದೀಪ ಬೆಳಗಿಸಿ ಉದ್ಘಾಟಿಸಿದರು.  ಪ್ರಗತಿಪರ ಕೃಷಿಕ ಸುಂದರ ಗೌಡ ಖಂಡಿಗ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಇಳಂತಿಲ ಕ್ಷೇತ್ರ ತಾ.ಪಂ.ಸದಸ್ಯ ಕೃಷ್ಣಯ್ಯ ಆಚಾರ್ಯ, ಬೆಳ್ತಂಗಡಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಗೌಡ ಕೈಕುರೆ, ಬೆಳ್ತಂಗಡಿ ಆರಕ್ಷಕ ಠಾಣಾ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ, ಪದ್ಮುಂಜ ಸಿ.ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ, ಬಂದಾರು ಗ್ರಾ.ಪಂ.ಮಾಜಿ ಸದಸ್ಯ ದಿನೇಶ್ ಗೌಡ ಖಂಡಿಗ ಉಪಸ್ಥಿತರಿದ್ದರು.
ವಲಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಯಜಮಾನ ಪ್ರೇಂಡ್ಸ್ ಮೈರೋಳ್ತಡ್ಕ ಪ್ರಥಮ, ಡಿ.ಪಿ.ಪ್ರೇಂಡ್ಸ್ ಬೆಳಾಲು ದ್ವಿತೀಯ ಸ್ಥಾನ
ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ಭಾರ್ಗವಿ ಫ್ರೆಂಡ್ಸ್ ಗುರುವಾಯನಕೆರೆ ಪ್ರಥಮ, ಶಿವನಗರ ಫ್ರೆಂಡ್ಸ್ ಮೈರೋಳ್ತಡ್ಕ ದ್ವಿತೀಯ, ಶಿವ ಫ್ರೆಂಡ್ಸ್ ಕುರಾಯ, ಖಂಡಿಗ, ಮೈರೋಳ್ತಡ್ಕ ತೃತೀಯ, ಎಲ್.ಎನ್.ಫ್ರೆಂಡ್ಸ್ ಊಂತನಾಜೆ ಚತುರ್ಥ ಬಹುಮಾನವನ್ನು ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.