ಇಳಂತಿಲ: ಹೈಮಾಸ್ಟ್ ದೀಪ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಸಾರ್ವಜನಿಕ ಸೊತ್ತುಗಳನ್ನು ಹಾಳುಮಾಡದೆ ರಕ್ಷಿಸುವುದು ದೇಶ ಸೇವೆಯ  ಒಂದು ಭಾಗ: ಎಂ.ಎಲ್.ಸಿ ಹರೀಶ್ ಕುಮಾರ್

ಇಳಂತಿಲ: ಇಳಂತಿಲ ಗ್ರಾಮದ ಕಾಯರ್ಪಾಡಿ ಜಂಕ್ಷನ್ ನಲ್ಲಿ ಅಳವಡಿಸಲಾದ ಹೈಮಾಸ್ಟ್ ದೀಪವನ್ನು  ವಿದಾನ ಪರಿಷತ್ ಶಾಸಕ ಹಾಗೂ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅದ್ಯಕ್ಷ  ಕೆ. ಹರೀಶ್ ಕುಮಾರ್ ರವರು  ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಸಾರ್ವಜನಿಕ ಸೊತ್ತುಗಳನ್ನು ಹಾಳುಮಾಡದೆ ರಕ್ಷಿಸುವುದು, ಬೀದಿ ದೀಪಗಳು ಹಗಲು ಹೊತ್ತಿನಲ್ಲಿ ಉರಿಯದಂತೆ ನೋಡಿಕೊಳ್ಳುವುದು ದೇಶ ಸೇವೆಯ ಒಂದು ಭಾಗ ಎಂದರು.

ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯರಾದ ಕೆ.ಕೆ. ಶಾಹುಲ್ ಹಮೀದ್, ಮಾಜಿ ತಾ.ಪಂ. ಸದಸ್ಯ ಈಶ್ವರ ಭಟ್ ಮಾಯಿಲ್ತೋಡಿ ಉಪಸ್ಥಿತರಿದ್ದರು.   ಮಾಜಿ ಗ್ರಾ.ಪಂ ಅದ್ಯಕ್ಷ, ನ್ಯಾಯವಾದಿ ಮನೋಹರ ಕುಮಾರ್, ಮಾಜಿ ಗ್ರಾ.ಪಂ ಸದಸ್ಯ ಈಶ್ವರ ಗೌಡ, ಇಳಂತಿಲ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ಹುಕ್ರಪ್ಪ ಗೌಡ ನಂದಿಲ, ಎಸ್. ಡಿ. ಎಂ.ಸಿ ಅದ್ಯಕ್ಷ ಆನಂದ ಪೂಜಾರಿ, ಪುತ್ತುಮೋನು, ಸಿದ್ದಿಕ್ , ದಿವಾಕರ ಬಂಗೇರ, ಮೋಹನ ನಾಯ್ಕ, ನಾರಾಯಣ ನಾಯ್ಕ, ಶರೀಪ್, ಜಿನ್ನಪ್ಪ ಪೂಜಾರಿ, ಇಬ್ರಾಹಿಂ, ಜಲೀಲ್, ಯತೀಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.

ಸಿದ್ದಿಕ್ ಗಂಡಿಬಾಗಿಲು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.