ಜಾತ್ಯತೀತ ಜನತಾದಳ ತಾಲೂಕು ಯುವ ಅಧ್ಯಕ್ಷ ಸೂರಜ್ ಗೌಡ ವಳಂಬ್ರ ಭಾರತೀಯ ಜನತಾ ಪಾರ್ಟಿ ಸೇರ್ಪಡೆ. ಬೆಳ್ತಂಗಡಿ. ಭಾರತೀಯ ಜನತಾ ಪಾರ್ಟಿಗೆ ತಾಲೂಕು ಜಾತ್ಯಾತೀತ ಜನತಾದಳದ ಯುವ ಅಧ್ಯಕ್ಷ ಸೂರಜ್ ಗೌಡ ವಳಂಬ್ರ ಬೆಂಬಲಿಗರಿಗೆ ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಪಕ್ಷದ ಧ್ವಜವನ್ನು ನೀಡಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆ ಮಾಡಿದರು ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್. ಬೆಳ್ತಂಗಡಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯನಂದ ಗೌಡ. ಬಿಜೆಪಿ ಮಂಡಲದ ಕಾರ್ಯದರ್ಶಿ ಪ್ರಶಾಂತ್. ಉಜಿರೆ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಅನಂತ್ ಮಚ್ಚಿಮಲೆ. ಬಿಜೆಪಿ ಮಂಡಲ ಉಪಾಧ್ಯಕ್ಷ ಸೀತಾರಾಮ್. ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಮಹಾಬಲ ಗೌಡ ಮುಂತಾದವರು ಉಪಸ್ಥಿತಿ ಯಿದ್ದರು