ನಾಲ್ಕೂರು: ಕರುಗಳನ್ನು ಕಾಡಿಗೆ ಬಿಟ್ಟು ಅಮಾನವೀಯ ಕೃತ್ಯ, ಹಿಂದು ಸಂಘಟಕರಿಂದ ರಕ್ಷಣೆ
ನಾಲ್ಕೂರು:ನಮ್ಮ ದೇಶದಲ್ಲಿ ಗೋವುಗಳಿಗೆ ತಾಯಿಯ ಸ್ಥಾನವನ್ನು ನೀಡಿದ್ದೆವೆ,ಗೋವುಗಳನ್ಮು ಅತ್ಯಂತ ಭಕ್ತಿಯಿಂದ ಪೂಜಿಸುತ್ತೇವೆ,ಅಂತಹದರಲ್ಲಿ ನಾಲ್ಕೂರು ಗ್ರಾಮದ ನಿಟ್ಟಡ್ಕ ಶಾಲಾ ಪರಿಸರದ ದೊಡ್ಡ ಗುಡ್ಡದಲ್ಲಿ ಯಾರೋ 10 ದಿವಸವಾದ ಎರಡು ಗಂಡು ಕರುಗಳನ್ಮು ಬಿಟ್ಡು ಅವಮಾನವೀಯ ವರ್ತನೆಯಯನ್ನು ಮಾಡಿದ್ದಾರೆ.
ಸಂಜೆಯ ಹೊತ್ತಿಗೆ ಎರಡು ಕರುಗಳು ಆಹಾರವಿಲ್ಲದೆ ಒದ್ದಾಡುವುದನ್ನು ಸಮೀಪದ ಜನಾರ್ದನ ಪೂಜಾರಿ,ರಮೇಶ್ ಪಾಲ್ಯ,ಪ್ರವೀಣ್ ಲಾಂತ್ಯಾರು, ಪದ್ಮನಾಭ ಕುಲಾಲ್ ಇವರುಗಳು ಕಂಡಿದ್ದು ಕೂಡಲೇ ಹಿಂದು ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ , ರಜತ್ ಹೆಗ್ಡೆ ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ಕರುಗಳನ್ಮು ರಕ್ಷಿಸಲಾಗಿದೆ..
ಕರುಗಳನ್ನು ಬಳಂಜ ಹಾಲು ಉತ್ಪಾದಕರ ಸಂಘದ ವಠಾರಕ್ಕೆ ತಂದು ಹಾಲು ನೀಡಿ ಪಕ್ಕದ ಸಂಜೀವ ಪೂಜಾರಿ ಅವರ ಹಟ್ಟಿಗೆ ಸ್ಥಳಾಂತರಿಸಲಾಯಿತು.
ಇಂತಹ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ವೇಣೂರು ಪೋಲಿಸ್ ಕೃಷ್ಣ, ಹಿಂದು ಸಂಘಟನೆಯ ಪ್ರಮುಖರಾದ ಶಶಾಂಕ್ ಭಟ್, ಸುರೇಶ್ ಹೇವ, ಬಾಲಕೃಷ್ಣ ಪೂಜಾರಿ, ಸುರೇಶ್ ಜೈಮಾತ, ಯಶೋಧರ ಶೆಟ್ಟಿ,ಹರೀಶ್ ,ಹೇಮಂತ್ ಕಟ್ಟೆ, ಸುರೇಶ್ ಸಪಲ್ಯ,ಆಗಮಿಸಿ ಅಗತ್ಯ ಕ್ರಮ ಜರುಗಿಸಿದರು.