ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಗೆ ರವಿಕುಮಾರ್ ಬರಮೇಲು ರಾಜೀನಾಮೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

* ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯಿಂದ ಹೊರ ಬಂದ ರವಿಕುಮಾರ್
* ಯಾರಾ ಮೇಲೂ ಸಿಟ್ಟೂ ಅಥವಾ ಬೇಸರದಿಂದ ಹೊರಬಂದಿರುವುದಿಲ್ಲ
* ಭಾಜಪದ ಪೂರ್ಣ ಕಾಲಿಕ ಕಾರ್ಯಕರ್ತನಾಗಿ ಮುಂದುವರಿಕೆ
* ಬಿಜೆಪಿಯಿಂದ ಗ್ರಾ.ಪಂ ಚುನಾವಣೆಯಲ್ಲಿ ಸ್ಪರ್ಧೆ


ಬೆಳ್ತಂಗಡಿ: ನಾನು ಈವರೆಗೆ ಪದಾಧಿಕಾರಿಯಾಗಿದ್ದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸದಸ್ಯತ್ವ ಸಹಿತ ಗೌರವಾಧ್ಯಕ್ಷತೆಗೆ  ರಾಜೀನಾಮೆ ನೀಡಿದ್ದು, ಅದರೊಂದಿಗಿದ್ದ ಎಲ್ಲಾ ಸಂಪರ್ಕವನ್ನೂ ಕೊನೆಗೊಳಿಸಿರುತ್ತೇನೆ. ಈ ಕ್ಷಣದಿಂದಲೇ ಭಾಜಪದ ಪೂರ್ಣಕಾಲಿಕ ಹಾಗೂ ನಿಷ್ಠಾವಂತ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಲು ತೀರ್ಮಾನಿಸಿರುತ್ತೇನೆ ಎಂದು ಉದ್ಯಮಿ ಹಾಗೂ ಕೊಡುಗೈ ದಾನಿ ರವಿಕುಮಾರ್ ಬರೆಮೇಲು ಹೇಳಿದ್ದಾರೆ.

ಅವರು ಡಿ.4ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿನ್ನು ಉದ್ದೇಶಿಸಿ ಮಾತನಾಡಿ, ನಾನು ಬಾಲ್ಯದಿಂದಲೂ ಆರ್‌ಎಸ್‌ಎಸ್, ಹಿಂದೂ ಜಾಗರಣ ವೇದಿಕೆ ಹಾಗೂ ಇತರ ಹಿಂದೂ ಪರ ಸಂಘಟನೆಳಲ್ಲಿ ತೊಡಗಿಸಿಕೊಂಡಿದ್ದು, ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿಯೂ ಪಕ್ಷದ ಬೆಳವಣಿಗೆಗೆ ಸಾಕಷ್ಟು ದುಡಿದ್ದೇನೆ ಎಂದು ತಿಳಿಸಿದರು.

ಹಿಂದೆ ಪಕ್ಷದಲ್ಲಿ ಸರಿಯಾದ ಜವಾಬ್ದಾರಿ ಇಲ್ಲದುದರಿಂದ ಎರಡು ಬಾರಿ ಪಕ್ಷೇತರನಾಗಿ ಚುನಾವಣೆಗೆ ನಿಂತು ಉಜಿರೆ ಗ್ರಾ.ಪಂ ಸದಸ್ಯನಾಗಿಯೂ ಸಾರ್ವಜನಿಕ ಸೇವೆ ಸಲ್ಲಿಸಿದ್ದೇನೆ. ಪಕ್ಷೇತರನಾಗಿ ಸ್ಪರ್ಧಿಸಿದ್ದರೂ, ಯಾವತ್ತೂ ಬಿಜೆಪಿಯ ನಿಷ್ಠೆಯನ್ನು ಬದಲಿಸಿಲ್ಲ. ಸಂಘಟನೆಯಲ್ಲಿ ಇದ್ದರೂ ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ಇದೀಗ ಪಕ್ಷದ ನಾಯಕರು ನನ್ನನ್ನು ಪಕ್ಷಕ್ಕೆ ಕರೆದು ಸಹಮತ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ಅವಕಾಶ ಒದಗಿ ಬಂದಿದ್ದರಿಂದ ಈ ಬಾರಿಯ ಗ್ರಾಮ ಪಂಚಾಯತು ಚುನಾವಣೆಯಲ್ಲಿ ಕಾರ್ಯಕರ್ತರ ಒತ್ತಾಯದಂತೆ ಉಜಿರೆಯ ಪೆರ್ಲ ಕ್ಷೇತ್ರದಲ್ಲಿ ಭಾಜಪ ಬೆಂಬಲಿತನಾಗಿ ಚುನಾವಣೆಗೆ ನಿಲ್ಲಲು ನಿರ್ಧರಿಸಿದ್ದು, ಅದಕ್ಕಾಗಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದೇನೆ ಎಂದು ಸ್ವಷ್ಟಪಡಿಸಿದರು.

ನಾನು ರಾಜೀನಾಮೆ ನೀಡಿ ಹೊರಬಂದಿರುವುದು ಯಾರ ಮೇಲೆ ಬೇಸರ ಅಥವಾ ಸಿಟ್ಟಿನಿಂದಲ್ಲ, ಮಾತೃ ಪಕ್ಷದಲ್ಲಿ ಕೆಲಸ ಮಾಡಬೇಕು ಎಂಬ ಇಚ್ಛೆಯಿಂದ. ಯಾರಿದಾದರೂ ನನ್ನ ಮೇಲೆ ಬೇಸರ, ಅಸಮಾಧಾನ ಇದ್ದರೆ ಎಲ್ಲರೂ ಅದನ್ನು ಬದಿಗಿಟ್ಟು ನನ್ನ ಮೇಲೆ ಕರುಣೆ ತೋರುವಂತೆ ವಿನಂತಿಯನ್ನು ಮಾಡುತ್ತೇನೆ ಎಲ್ಲರ ಸಹಕಾರ ಬಯಸುತ್ತೇನೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಜು ಮುಂಡತ್ತೋಡಿ, ರಾಮಚಂದ್ರ ಗೌಡ ಪೆರ್ಲ, ಹರೀಶ್ ನಾಯ್ಕ ಪೆರ್ಲ, ರಮೇಶ್ ನಾಯ್ಕ ಮಾಚಾರ್, ಗಣೇಶ್ ಡಿ.ಪಿ ಬದನಾಜೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.