ಕಳಿಯ ಬದಿನಡೆ ದೈವಸ್ಥಾನ ಮೇಲ್ಛಾವಣಿ ಮಾಡು ಜೋಡಣೆ ಮುಹೂರ್ತ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗೇರುಕಟ್ಟೆ : ಇಲ್ಲಿಯ ಕಳಿಯ ಗ್ರಾಮದ ಬದಿನಡೆ ದೈವಸ್ಥಾನದ ಮೇಲ್ಛಾವಣಿ ಮಾಡು ಜೋಡಣೆ ಮುಹೂರ್ತ ಕಾರ್ಯಕ್ರಮ ಡಿ. 4 ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾರ್ಗ ದರ್ಶನದಲ್ಲಿ, ಕುಂಠಿನಿ ರಾಘವೇಂದ್ರ ಬಾಂಗಿಣ್ಣಾಯ, ನಡ ಗುತ್ತು ಮುನಿರಾಜ್ ಆಜ್ರಿ, ಕಳಿಯ ಬೀಡು ಸುರೇಂದ್ರ ಕುಮಾರ್ ಮತ್ತು ಸಹೋದರರು  ಹಾಗೂ ಊರಿನ ಭಕ್ತಾದಿಗಳ ನೇತೃತ್ವದಲ್ಲಿ ನಡೆಯಿತು. ಮರದ ಶಿಲ್ಪಿ ಶ್ಯಾಮರಾಯ ಆಚಾರ್ಯ ಮತ್ತು ಪುತ್ರ ಶಿಲ್ಪಾಕಲಾ ಪ್ರಶಸ್ತಿ ವಿಜೇತ ಜಯಚಂದ್ರ ಆಚಾರ್ಯ ನೇತೃತ್ವದಲ್ಲಿ ಮರದ ಕೆತ್ತನೆ ಕೆಲಸ ನಡೆಯಿತು.

ಬದಿನಡೆ, ಮಂಜಲಡ್ಕ ಕಲ್ಕುಡ ಮಾಡ ದೈವಗಳ ಸನ್ನಿಧಿಗೆ ಸುಮಾರು 150 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಬದಿನಡೆ ದೈವಸ್ಥಾನದಲ್ಲಿ ಆಯಿವೇರ್ ಉಳ್ಳಾಕುಲು, ಉಳ್ಳಾಲ್ತಿ, ಬಂಗಾಡಿ ದೈವ ಮತ್ತು ಮಂಜಲಡ್ಕ ದೈವಸ್ಥಾನದಲ್ಲಿ ಕೊಡಮಣಿತ್ತಾಯ, ಕಲ್ಕುಡ- ಕಲ್ಲುರ್ಟಿ, ಪಿಲಿಚಾಮುಂಡಿ ದೈವಗಳ ಮೂಲಸ್ಥಾನದ ಜೀರ್ಣೋದ್ಧಾರ ಕೆಲಸವೂ, ಕಳಿಯ ಬೀಡು ಮತ್ತು ಸ್ಥಳೀಯ ಗ್ರಾಮಸ್ಥರು ಮುಂದಾಗಿದ್ದಾರೆ.


ಈ ಸಂದರ್ಭದಲ್ಲಿ ಕಳಿಯ ಸಿ.ಎ.ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ಸ್ಥಳೀಯ ಉದ್ಯಮಿ ವೆಂಕಟರಮಣ ಪೈ, ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ದನ ಗೌಡ ಕೆ, ಉಪಾಧ್ಯಕ್ಷ ಯಶೋಧರ ಶೆಟ್ಟಿ ಕೆ, ಸಂಘದ ನಿರ್ದೇಶಕರು , ಕಳಿಯ ಪಂ.ಮಾಜಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಕೊಂಕಣ್ ರೈಲ್ವೆ ಅಧಿಕಾರಿ ಸತೀಶ್ ಕುಮಾರ್ ಆರ್., ಕುವೆಟ್ಟು ಪಂ.ಮಾಜಿ ಅಧ್ಯಕ್ಷ ಪೂವಪ್ಪ ಭಂಡಾರಿ , ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೂಸಪ್ಪ ಗೌಡ, ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು, ಕಳಿಯ ಪಂ.ಮಾಜಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಕಳಿಯ, ನ್ಯಾಯತರ್ಫು ಹಾಗೂ ಓಡಿಲ್ನಾಳ ಗ್ರಾಮಸ್ಥರು ಉಪಸ್ಥಿತರಿದ್ದರು.

ರಾಘವ ಹೆಚ್.ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಕೇಶವ ಬಂಗೇರ ಕಾರ್ಯಕ್ರಮ ನಿರ್ವಹಣೆ ಮಾಡಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.