ಬೆಳ್ತಂಗಡಿ: ಬೆಳ್ತಂಗಡಿ ಸಂತೆಕಟ್ಟೆ ಸುವರ್ಣ ಆರ್ಕೇಡ್ನಲ್ಲಿ ನೂತನವಾಗಿ ಪ್ರಾರಂಭಗೊಂಡ ಪೂರ್ಣಚಂದ್ರ ಸೂಪರ್ ಮಾರ್ಟ್ ಇದರ ಶುಭಾರಂಭವು ಇತ್ತೀಚೆಗೆ ನಡೆದಿದ್ದು ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಭೇಟಿ ನೀಡಿ ಸಂಸ್ಥೆಗೆ ಶುಭಕೋರಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಉಜಿರೆ ಲಕ್ಷ್ಮೀ ಗ್ರೂಪ್ಸ್ನ ಮಾಲಕ ಮೋಹನ್ ಕುಮಾರ್, ಸಂಧ್ಯಾ ಟ್ರೇಡರ್ಸ್ ರಾಜೇಶ್ ಪೈ ಉಪಸ್ಥಿತರಿದ್ದರು.
ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ರವರನ್ನು ಸಂಸ್ಥೆಯ ಮಾಲಕರಾದ ಚಂದ್ರಶೇಖರ್ ಪೂಜಾರಿ, ಶ್ರೀಮತಿ ಶೋಭಾ ಸಿ ಪೂಜಾರಿ, ಹಾಗೂ ವಿಜಯ್ ರವರು ಆತ್ಮೀಯವಾಗಿ ಬರಮಾಡಿಕೊಂಡು, ಶಾಲು ಹೊದಿಸಿ ಸ್ವಾಗತಿಸಿದರು.