ಗುರುವಾಯನಕೆರೆ : ಇಲ್ಲಿಯ ಗುರುವಾಯನಕೆರೆ – ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿಯ ಪಣೆಜಾಲು ಮಿಂಚಿನಡ್ಕ ಸಮೀಪ ಕಾರುಗಳು ಪರಸ್ಪರ ಡಿಕ್ಕಿ ಹೊಡೆದ ಘಟನೆ ಡಿ.3 ರಂದು ಸಂಜೆ 5 ಗಂಟೆಯ ವೇಳೆ ನಡೆದಿದೆ.
ಬೆಳಾಲು ನಿವಾಸಿ ಓಮ್ನಿ ಕಾರು ಚಾಲಕನ ಕಾಲಿಗೆ ಗಂಭೀರ ಗಾಯಗಳಾಗಿದ್ದು. ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಉಪ್ಪಿನಂಗಡಿ ಸಂಬಂಧಿಕರ ಮನೆಯಲ್ಲಿ ನಡೆದಿರುವ ಕಾರ್ಯಕ್ರಮವನ್ನು ಮುಗಿಸಿಕೊಂಡು ಬೆಳಾಲಿನ ತಮ್ಮ ಮನೆಗೆ ತೆರಳುವ ವೇಳೆ ಗುರುವಾಯನಕೆರೆ ಮಾರ್ಗ ಮೂಲಕ ಪುತ್ತೂರಿಗೆ ಪ್ರಯಾಣಿಸುತ್ತಿದ್ದ ಮಂಗಳೂರು ನಗರದ 4 ಮಂದಿ ಯುವಕರ ಐ 10 ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳ ಮುಂಭಾಗ ಸಂಪೂರ್ಣವಾಗಿ ನುಜ್ಜು ಗುಜ್ಜಾಗಿದೆ.
ಓಮ್ನಿ ಕಾರಿನಲ್ಲಿದ್ದ ಸಹ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವಿಚಾರ ತಿಳಿದು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಬೆಳ್ತಂಗಡಿ ಸಂಚಾರಿ ಠಾಣಾಧಿಕಾರಿಗಳು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು ಹಾಗೂ ಅಪಘಾತಕ್ಕೀಡಾದ ಕಾರುಗಳನ್ನು ಠಾಣೆಗೆ ಕೊಂಡೊಯ್ದು ಕೇಸು ದಾಖಲಿಸಿದ್ದಾರೆ.