ಮಾನವೀಯತೆಗೆ ಮತ್ತೊಮ್ಮೆ ಸಾಕ್ಷಿಯಾದ ಅಂಬುಲೆನ್ಸ್ ಚಾಲಕ ಹನೀಫ್ ಬಳಂಜ
ಬೆಳ್ತಂಗಡಿ: ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಶ್ವಾಸಕೋಶ ಸಂಪೂರ್ಣವಾಗಿ ಹಾನಿಯಾಗಿ ಕೃತಕ ಆಕ್ಸಿಜನ್ನಲ್ಲಿ ಉಸಿರಾಡುತ್ತಿದ್ದ ೨೨ರ ಹರೆಯದ ಸುಹಾನರವರಿಗೆ ಅತೀ ಶೀಘ್ರ ಶ್ವಾಸಕೋಶ ಬದಲಾವಣೆಗಾಗಿ ಡಿ. 2ರಂದು ಪುತ್ತೂರಿನಿಂದ ಬೆಂಗಳೂರಿಗೆ ತುರ್ತು ಶಸ್ತ್ರಚಿಕಿತ್ಸೆಗಾಗಿ ಎಮರ್ಜೆನ್ಸಿ ಅಲರ್ಟ್ ನಲ್ಲಿ ಅಂಬುಲೆನ್ಸ್ ಬೆಳ್ತಂಗಡಿ ಮೂಲಕ ಚಾರ್ಮಾಡಿ ರಸ್ತೆಯಲ್ಲಿ ಹಾದು ಹೋಯಿತು.

ಬಳಂಜ ನಿವಾಸಿ ಕೆ ಎಂ ಸಿ ಸಿ ಅಂಬ್ಯುಲೆನ್ಸ್ ಚಾಲಕ ಹನೀಫ್ ಬಳಂಜ ಯಶಸ್ವಿಯಾಗಿ ಮುನ್ನಡೆಸಿದರು. ಇವರು ಈ ಮೊದಲು 45 ದಿನದ ಮಗುವಿನ ರಕ್ಷಣೆಗೆ 390 ಕಿ.ಮೀ ದೂರವನ್ನು ಕೇವಲ 4.35 ಗಂಟೆಗಳಲ್ಲಿ ಬೆಂಗಳೂರಿನಿಂದ ಕ್ಯಾಲಿಕಟ್ ಮಿಮ್ಸ್ ಆಸ್ಪತ್ರೆಗೆ ತಲುಪಿಸಿದ್ದಾರೆ ಹಾಗೂ ಕಳೆದ ವರ್ಷ ಮಂಗಳೂರಿನಿಂದ ಬೆಂಗಳೂರಿನ ಆಸ್ಪತ್ರೆಗೆ ಹಲವು ರೋಗಿಗಳನ್ನು ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಇವರ ನಿಸ್ವಾರ್ಥ ಸೇವೆಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇವರನ್ನು ಅನೇಕ ಜನ ಪ್ರತಿನಿಧಿಗಳು, ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ. ಇವರು ಜಿಲ್ಲೆಯ ಉತ್ತಮ ವಾಲಿಬಾಲ್ ಆಟಗಾರರಾಗಿದ್ದಾರೆ.