ಧರ್ಮಸ್ಥಳ: ಇಲ್ಲಿನ ಕನ್ಯಾಡಿ 2 ಪರ್ಜನ್ಯ ನಿವಾಸಿ, ಖ್ಯಾತ ಪುರೋಹಿತರಾಗಿದ್ದ ರಾಮ ಬಾಳ್ತಿಲ್ಲಾಯ (74), ಅಲ್ಪಕಾಲದ ಅಸ್ವಸ್ಥ್ಯದಿಂದ ನ.28ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಇವರು ಪತ್ನಿ ಸುನಂದ, ಮೂವರು ಮಕ್ಕಳಾದ ಡಾ. ಶ್ರೀಕಾಂತ್ -ಶ್ರೀಮತಿ ಶ್ರೀಲತಾ ದಂಪತಿ, ಶ್ರೀಮತಿ ಶ್ರೀದೇವಿ-ಶ್ರೀ ವಾದಿರಾಜ ಶಬರಾಯ ದಂಪತಿ, ಶ್ರೀನಿವಾಸ ಎಂ-ಡಾ. ಶ್ರೀನಿಧಿ ಅಡಿಗ ದಂಪತಿ, ಐವರು ಮೊಮ್ಮಕ್ಕಳು, ನಾಲ್ಕು ಜನ ಸಹೋದರ-ಸಹೋದರಿಯರು, ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ತಾಲೂಕಿನ ಶಿಶಿಲ, ಪಜಿರಡ್ಕ ಸೇರಿದಂತೆ, ಹಲವು ದೇಗುಲಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಇವರು, ಕಳೆದ ಐದು ದಶಕಗಳಿಂದ ಪುರೋಹಿತರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಹಿಂದೆ ವಾಹನ ಸೌಕರ್ಯವಿಲ್ಲದ ದಿನಗಳಲ್ಲಿ ಊರ-ಪರ ಊರ ಮನೆಗಳಿಗೆ ನಡೆದುಕೊಂಡು ತೆರಳಿ, ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಡುತ್ತಿದ್ದು, ಜನಾನುರಾಗಿಯಾಗಿದ್ದರು.
ಇವರ ಹಿರಿಯ ಪುತ್ರ ಡಾ. ಶ್ರೀಕಾಂತ ಬಾಳ್ತಿಲ್ಲಾಯ ಕೂಡಾ ಖ್ಯಾತ ಸಂಸ್ಕೃತ ವಿದ್ವಾಂಸ ಹಾಗೂ ಪುರೋಹಿತರಾಗಿದ್ದಾರೆ. ಇವರ ಇನ್ನೋರ್ವ ಪುತ್ರ ಶ್ರೀನಿವಾಸ ಎಂ ಅವರು
ಪ್ರತಿಷ್ಠಿತ ಆಂಗ್ಲ ದೈನಿಕ ದಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಪತ್ರಕರ್ತರಾಗಿದ್ದಾರೆ.
ಮೃತರ ಅಂತಿಮ ಕ್ರಿಯೆ, ಅವರ ಮನೆಯಲ್ಲಿ ನಡೆಯಿತು. ಕುಟುಂಬಸ್ಥರು ಹಾಗೂ ಅವರ ಸ್ನೇಹಿತರು ಇದರಲ್ಲಿ ಪಾಲ್ಗೊಂಡಿದ್ದರು.