ಇಂದು ಅಂತರಾಷ್ಟ್ರೀಯ ಏಡ್ಸ್ ದಿನ
ಜಗತ್ತನ್ನು ಕಾಡುವ ಅನೇಕ ಮಾರಣಾಂತಿಕ ರೋಗಳಲ್ಲಿ ಎಚ್.ಐ.ವಿ. ಸೊಂಕು ಕೂಡ ಒಂದು. ಈ ಕುರಿತು ಜನರಲ್ಲಿ ಅದೆಷ್ಟು ಅರಿವು ಮೂಡಿಸಿದರೂ ಇವರೆಗೂ ಸಂಪೂರ್ಣವಾಗಿ ತಡೆಹಿಡಿಯಲು ಸಾದ್ಯವಾಗಿಲ್ಲ. ಅತಿಯಾದ ಲೈಂಗಿಕತೆಯಿಂದ ಜನರು ತಮ್ಮ ದೇಹದ ಆರೋಗ್ಯದ ಬಗ್ಗೆ ಚಿಂತಿಸದೆ ನಂತರದಲ್ಲಿ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಯುವ ಸಮುದಾಯವೇ ಇಂತಹ ರೋಗಗಳ ದಾಸರಾಗುತ್ತಿರುವುದರಿಂದ ದೇಶದ ಪ್ರಗತಿಗೆ ಮಾರಕವಾಗುತ್ತಿದೆ. ರೋಗದ ಕುರಿತು ಜನರಲ್ಲಿ ಜಾಗ್ರತಿ ಮೂಡಿಸಲು ರೋಗ ಬಾರದಂತೆ ಹಾಗೂ ಸೂಕ್ತ ಚಿಕಿತ್ಸಾ ಕ್ರಮ ಕೈಗೊಳ್ಳುವಂತೆ ಸರಕಾರವು ಅಂತರಾಷ್ಟ್ರೀಯ ಏಡ್ಸ್ ದಿನವನ್ನು ಡಿಸೆಂಬರ್ 1 ರಂದು ಜಗತ್ತಿನಾದ್ಯಂತ ಆಚರಿಸುತ್ತಿದೆ.
1988ರಿಂದ ಈ ಕುರಿತು ಜನರಲ್ಲಿ ಜಾಗ್ರತಿ ಮೂಡಿಸಲು ಪ್ರಾರಂಭವಾಯಿತು
ಎಚ್.ಐ.ವಿ ಯಂತಹ ಮಾರಕ ಖಾಯಿಲೆಯನ್ನು ಸಂಪೂರ್ಣವಾಗಿ ತೆಗೆದು ಹಾಕುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಏಡ್ಸ್ ದಿನವನ್ನು 1988ರ ಡಿಸೆಂಬರ್ 1ರಿಂದ ಪ್ರತಿ ವರ್ಷ ಆಚರಿಸುತ್ತಾ ಬಂದಿದೆ. ಈ ಮೂಲಕ ಜನರಲ್ಲಿ ಇರುವ ಭಯ ಹಾಗು ರೋಗವನ್ನು ತಡೆಗಟ್ಟಲು ವಹಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡುತ್ತಾ ಬಂದಿದೆ. ವಿಶ್ವ ಸಂಸ್ಥೆಯ ಈ ಕಾರ್ಯಕ್ಕೆ ಇತರೆ ಸದಸ್ಯ ರಾಷ್ಟ್ರಗಳು ಕೂಡ ಸಹಕಾರ ನೀಡುತ್ತಾ ಬಂದಿದೆ. ಈ ಪ್ರಯತ್ನದ ಫಲವಾಗಿ ಇತ್ತೀಚೆಗೆ ರೋಗಿಗಳ ಸಂಖ್ಯೆಯೂ ಕೂಡ ಕಡಿಮೆಯಾಗುತ್ತಾ ಬಂದಿದೆ. ಈ ಕುರಿತು ಜನರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಾಗೃತರಾಗಬೇಕಿದೆ.
ಏಡ್ಸ್ ಎಂದರೇನು?
ಎಚ್.ಐ.ವಿ ಎಂಬುವುದು ರೋಗ ನಿರೋಧಕ ಶಕ್ತಿಯನ್ನು ಹಂತ ಹಂತವಾಗಿ ಕುಂಠಿತಗೊಳಿಸುತ್ತಾ ಹೋಗುತ್ತದೆ. ಅತಿಯಾದ ಲೈಂಗಿಕತೆಯಿಂದ ಈ ರೋಗವು ವ್ಯಕ್ತಿಯ ದೇಹವನ್ನು ಸೇರಿ ವಿವಿಧ ರೋಗಗಳು ದೇಹವನ್ನು ಅತಿಕ್ರಮಿಸಿ ಸಿಡಿ_೪ ಕೋಶವನ್ನು ನಾಶಪಡಿಸುತ್ತದೆ. ಬಳಿಕ ಎಚ್.ಐ.ವಿ ಪೀಡಿತ ವ್ಯಕ್ತಿ ಏಡ್ಸ್ ರೋಗಕ್ಕೆ ತುತ್ತಾಗುತ್ತಾನೆ.
ರೋಗದ ಲಕ್ಷಣಗಳು.
ಎಚ್.ಐ.ವಿ ವೈರಾಣವು ಒಬ್ಬ ವ್ಯಕ್ತಿಯ ದೇಹವನ್ನು ಪ್ರವೇಶಿಸಿದರೂ ದೀರ್ಘ ಸಮಯ ಯಾವುದೆ ರೋಗಲಕ್ಷಣವನ್ನು ಉಂಟು ಮಾಡದೇ ಇರಬಹುದು. ಈ ಸಂದರ್ಭದಲ್ಲಿ ವ್ಯಕ್ತಿ ಸಾಮಾನ್ಯನಂತೆಯೇ ಇರುತ್ತಾನೆ. ಆ ನಂತರ ಆತನಲ್ಲಿ ಜ್ವರ, ತಲೆ ನೋವು, ಕೀಲುನೋವು ಹಾಗೂ ಬಾಯಿ ಮತ್ತು ಗಂಟಲುಗಳಲ್ಲಿ ಹುಣ್ಣುಗಳು ಕಾಣಿಸಿಕೊಳ್ಳುತ್ತವೆ. ದುಗ್ಧಗ್ರಂಥಿಗಳು ಊದಿಕೊಳ್ಳುತ್ತವ ಜೊತೆಗೆ ತುರಿಕೆಯೂ ಪ್ರಾರಂಭವಾಗುತ್ತದೆ. ಈ ಲಕ್ಷಣಗಳ ಜೊತೆಗೆ ಬಾಹ್ಯಲಕ್ಷಣಗಳು ಕೂಡ ಕಾಣಿಸಿಕೊಳ್ಳುತ್ತದೆ. ವೈರಾಣುಗಳ ಸಂಖ್ಯೆ ವೃದ್ಧಿಯಾಗುತ್ತಾ ಹೋಗುತ್ತದೆ. ಕ್ರಮೇಣ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ದುಗ್ಧಗ್ರಂಥಿಗಳು ಊದಿಕೊಳ್ಳುವುದರ ಜೊತೆಗೆ ಮುಖ್ಯವಾಗಿ ಕತ್ತಿನ ಭಾಗದ ಸುತ್ತ ಈ ಊತ ಕಂಡು ಬರುತ್ತದೆ. ಇದು ಎಡ್ಸ್ ರೋಗ ಸಂಪೂರ್ಣವಾಗಿ ಪ್ರಾರಂಭವಾಗಿರುತ್ತದೆ ಎಂಬುದರ ಲಕ್ಷಣ.
ದ್ವಿತೀಯ ಹಂತದ ಲಕ್ಷಣಗಳು
* ರೋಗ ನಿರೋಧಕ ಶಕ್ತಿ ಪೂರ್ಣವಾಗಿ ಕುಂದಿರುತ್ತದೆ
* ಪ್ರತಿ ತಿಂಗಳು ಶೆ.೧೦ ರಷ್ಟು ತೂಕ ಖಡಿಮೆಯಾಗುತ್ತದೆ
* ಚರ್ಮದಲ್ಲಿ ತುರಿಕೆ, ಉಸಿರಿನ ನಾಳದಲ್ಲಿ ಉರಿಯೂತ, ಕೆಮ್ಮು ಹಾಗು ಕಫ ಉಂಟಾಗುವಿಕೆ
* ನಿರಂತರವಾಗಿ ತೀವ್ರ ದಣಿವಾಗುವುದು
* ಒಂದು ತಿಂಗಳಿಗೂ ದೀರ್ಘವಾಗಿ ಉಳಿಯುವ ಜ್ವರ
* ಒಂದು ತಿಂಗಳಿಗೂ ಅಧಿಕ ಕಾಲ ಅತಿಸಾರ ಭೇದಿ
* ನೆನಪಿನ ಶಕ್ತಿ ಕುಂದುವುದು
ಎಚ್.ಐ.ವಿ ಪತ್ತೆಗಿರುವ ಪರೀಕ್ಷೆಗಳು
* ಎಲಿಸಾ
* ಪಿಸಿಆರ್ ಪಾಲಿಮರೇಸ್ ಚೈನ್ ರಿಯಾಕ್ಷನ್
* ವೆಸ್ಟರ್ನ್ ಬ್ಲಾಟ್
ತಡೆಗಟ್ಟುವ ಕ್ರಮ
ಸೋಂಕು ತಗಲಿರುವ ವ್ಯಕ್ತಿಯ ಜೊತೆಗೆ ಅಸುರಕ್ಷಿತ ಲೈಂಗಿಕ ಸಂಪರ್ಕ ನಡೆಸದೆ ಇರುವುದು ಉತ್ತಮ. ಸೋಂಕು ತಗಲಿದ ವ್ಯಕ್ತಿಯ ರಕ್ತವನ್ನು ದಾನ ಪಡೆದುಕೊಳ್ಳಬಾರದು. ಮತ್ತು ಅಂತಹ ವ್ಯಕ್ತಿಗೆ ರಕ್ತದಾನ ಮಾಡಬಾರದು. ತಾಯಿಯಿಂದ ಮಗುವಿಗೆ ರೋಗ ಹರಡುತ್ತದೆ, ಸೋಂಕು ತಗುಲಿದ ವ್ಯಕ್ತಿಗೆ ಬಳಸಿದ ಸೂಜಿ ಸಿರಿಂಜ್ ಗಳನ್ನು ಆರೋಗ್ಯವಂತ ವ್ಯಕ್ತಿಗೆ ಬಳಸಬಾರದು ಇದರಿಂದ ಕೂಡ ರೋಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.
ಮಾಹಿತಿ ಸಂಗ್ರಹ : ಸಂದೀಪ್