ಉಜಿರೆ: ಅಕ್ರಮ ಗಾಂಜಾ ಪತ್ತೆ ಆರೋಪಿ ಸೆರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಧರ್ಮಸ್ಥಳ ಗ್ರಾಮದ ಹೊಸ ಕೆ.ಎಸ್.ಆರ್.ಟಿ.ಸಿ ಬಸ್ಸು ತಂಗುದಾಣದ ಬಳಿ ಅನುಮಾನಾಸ್ಪದದಿಂದ ಓಡಾಡುತ್ತಿದ್ದ ಯುವಕನೋರ್ವನನ್ನು ಬಂಧಿಸಿ ಧರ್ಮಸ್ಥಳದ ಪೊಸೊಳಿಕೆ ನಿವಾಸಿ ಮಂಜು ಯಾನೆ ಮಂಜುನಾಥ (29) ನನ್ನು ವಶಕ್ಕೆ ಪಡೆಯಲಾಗಿದೆ.
ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷ ಚಂದ್ರಶೇಖರ ಕೆ. ಹಾಗೂ ಸಿಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಂದರ್ಭ ಬಸ್ಸು ಪಾರ್ಕಿಂಗ್ ಜಾಗದಲ್ಲಿ ಮಂಜುನಾಥನನ್ನು ಗಮನಿಸಿ ಅನುಮಾನಗೊಂಡು ಪ್ರಶ್ನಿಸಿದಾಗ ಓಡಲು ಪ್ರಯತ್ನಿಸಿದ್ದಾನೆ. ತಕ್ಷಣ ಬಂಧಿಸಿ ಆತನ ಬ್ಯಾಗ್ ಪರಿಶೀಲಿಸಿದಾಗ ಗಾಂಜಾ ಗಿಡದ ಗೆಲ್ಲು, ಗಾಂಜಾ ಮೊಗ್ಗುಗಳು, ಎಲೆ, ಬೀಜಗಳು ಕಂಡು ಬಂದಿದೆ.
ಒಟ್ಟು 750 ಗ್ರಾಂ ಗಾಂಜಾ ಗೆಲ್ಲು, ಎಲೆ, ಹೂವು ಮತ್ತು ಬೀಜ ಇದ್ದು ಇದರ ಅಂದಾಜು ಮೌಲ್ಯ 15೦೦೦ ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತು ಧರ್ಮಸ್ಥಳ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.