ಬೆಳ್ತಂಗಡಿ ಚರ್ಚ್ ಕ್ರಾಸ್ ಬಳಿ ಬಾವಿಯಲ್ಲಿ ಮೃತದೇಹ ಪತ್ತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ವೆಲಂಕಣಿ ಆಟೋ ವರ್ಕ್ಸ್‌ನ ಮಾಲಕ ಮ್ಯಾಕ್ಸಿಮ್ ಮಾಡ್ತಾ

ಬೆಳ್ತಂಗಡಿ : ಇಲ್ಲಿಯ ಚರ್ಚ್ ಕ್ರಾಸ್ ಬಳಿ ವೆಲಂಕಣಿ ಆಟೋ ವರ್ಕ್ಸ್‌ನ ಮಾಲಕ ಮ್ಯಾಕ್ಸಿಮ್ ಮಾಡ್ತಾ (55.ವ)ರವರ ಮೃತದೇಹ ಅವರ ಪಕ್ಕದ ಮನೆಯ ಬಾವಿಯಲ್ಲಿ ಪತ್ತೆಯಾದ ಪ್ರಕರಣ ಡಿ.1ರಂದು ಬೆಳಕಿಗೆ ಬಂದಿದೆ.

ಗ್ಯಾರೇಜ್ ವೃತ್ತಿಯನ್ನು ನಿರ್ವಹಿಸುತ್ತಿದ್ದ ಮ್ಯಾಕ್ಸಿಮ್ ಮಾಡ್ತಾ ರವರು ಪ್ರತೀ ದಿನ ಮುಂಜಾವ 5 ಗಂಟೆಗೆ ವಾಕಿಂಗ್ ಹೋಗುತ್ತಿದ್ದು, ಇಂದು ಮುಂಜಾನೆ ಮನೆಯಿಂದ ಹೊರಟವರು ಮರಳಿ ಮನೆಗೆ ವಾಪಸಾಗದ ಕಾರಣ ಮನೆ ಮಂದಿ ಹುಡುಕಾಟ ನಡೆಸಿದ್ದು, ಪಕ್ಕದ ಮನೆಯವರ ಬಾವಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ.

ಮ್ಯಾಕ್ಸಿಮ್ ಮಾಡ್ತಾ ರವರ ಮನೆ

ಪಕ್ಕದ ಮನೆಯವರು ಮನೆಯಲ್ಲಿ ಇಲ್ಲದ ಸಂದರ್ಭ ಈ ಘಟನೆ ನಡೆದಿದ್ದು, ಘಟನೆಗೆ ಸೂಕ್ತ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಠಾಣಾ ಎಸ್.ಐ ನಂದ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ.

ಮೃತರು ತಾಯಿ, ಪತ್ನಿ ಶಿಕ್ಷಕಿಯಾದ ಬೆನೆಡಿಕ್ಟ್, ಪುತ್ರ, ಪುತ್ರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ

 

 

 

 

https://www.facebook.com/385571774792714/videos/138607554389899

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.