ಬೆಳ್ತಂಗಡಿ: ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ ಪದ್ಮಪ್ರಸಾದ ಅಜಿಲರ ಪಟ್ಟಾಭಿಷೇಕದ ರಜತ ಸಂಭ್ರಮಾಚರಣೆ ಪ್ರಯುಕ್ತ ಅವರನ್ನು ಸೌತ್ ಕೆನರಾ ಫೋಟೊಗ್ರಾಪರ್ಸ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಅಳದಂಗಡಿ ಅರಮನೆಯಲ್ಲಿ ಡಿ .1ರಂದು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷ ಸುರೇಶ್ ಬಿ ಕೌಡಂಗೆ, ಗೌರವಾಧ್ಯಕ್ಷ ಎನ್ ಎ ಗೋಪಾಲ್ ಅಳದಂಗಡಿ, ಪ್ರಧಾನ ಕಾರ್ಯದರ್ಶಿ ಗಂಗಾಧರ ಉಜಿರೆ. ಉಪಾಧ್ಯಕ್ಷ ಮಹಾವೀರ ಜೈನ್, ಸೌತ್ ಕೆನರಾ ಫೋಟೊಗ್ರಾಪರ್ಸ್ ಅಸೋಸಿಯೇಷನ್ ದ ಕ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ, ಎಸ್ ಕೆ ಪಿ ವಿವಿದೋಧ್ಧೇಶ ಸಹಾಕಾರಿ ಸಂಘದ ನಿರ್ದೇಶಕ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್, ವಲಯದ ಮಾಜಿ ಅಧ್ಯಕ್ಷ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಕಿರಣ್ ಕುಮಾರ್ ಅಳದಂಗಡಿ, ವಲಯದ ಮಾಧ್ಯಮ ಪ್ರತಿನಿಧಿ ಮನು ಮದ್ದಡ್ಕ, ಸದಸ್ಯ ಬಾಲಕೃಷ್ಣ ಶೆಟ್ಟಿ ನೇಸರ ಸ್ಟುಡಿಯೋ ಪೆರಲ್ದರಕಟ್ಟೆ, ಸುದೀಶ್ ವೇಣೂರು,ರವಿ ಪೂಜಾರಿ ನಾರಾವಿ, ಸಂದೀಪ್ ಶಿರ್ಲಾಲು ಉಪಸ್ಥಿತರಿದ್ದರು