ಅಳದಂಗಡಿ: ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರ ಪಟ್ಟಾಭಿಷೇಕದ ರಜತ ಸಂಭ್ರಮದಲ್ಲಿ ಅರಸರು ಸಾರ್ವಜನಿಕರಿಂದ ಗೌರವ ಸ್ವೀಕರಿಸಿದರು.
ಸಂಭ್ರಮಾಚರಣೆ ಅಂಗವಾಗಿ ರವಿಚ್ಚಂದ್ರ ಕನ್ನಡಿಕಟ್ಟೆ, ಗೀರೀಶ್ ರೈ ಕಕ್ಕೆಪದವು, ಕಾವ್ಯಶ್ರೀ ಅಜೇರು ಅವರಿಂದ ಯಕ್ಷ ಗಾಯನ ವೈಭವ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ, ಮಾಜಿ ಸಚಿವ ಅಭಯಚ್ಚಂದ್ರ ಜೈನ್, ಎ.ಸಿ ಯತೀಶ್ ಉಲ್ಲಾಲ್, ವೇಣೂರು ಠಾಣೆಯ ಸಬ್ ಇನ್ಸ್ಪೆಕ್ಟರ್ ಲೋಲಾಕ್ಷ ಕೆ, ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್,ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್, 12 ಮಾಗಣೆಯ ಗುರಿಕಾರರು, ಅಜೀಲ ಸೀಮೆಯ ಪ್ರಮುಖರು, ಸರಕಾರಿ ಶಾಲೆ ಉಳಿಸಿ ಹೋರಾಟಗಾರ ಪ್ರಕಾಶ್ ಅಂಚನ್, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರವರು ಉಪಸ್ಥಿತರಿದ್ದರು