ಅಳದಂಗಡಿ ಅರಮನೆಯ ತಿಮ್ಮರಸರಾದ ಡಾ| ಪದ್ಮಪ್ರಸಾದ್ ಅಜಿಲರ ಪಟ್ಟಾಭಿಷೇಕದ ರಜತ ಸಂಭ್ರಮಾಚರಣೆ,ವಿವಿಧ ಕ್ಷೇತ್ರದ ಗಣ್ಯರಿಂದ ಗೌರರ್ಪಣೆ
ಅಳದಂಗಡಿ: ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ೧೯೯೫ರಿಂದ ಪಟ್ಟಾಭಿಷಕ್ತರಾಗಿ ಇಂದಿನವರೆಗೆ ೨೫ವರ್ಷಗಳಲ್ಲಿ ಸೀಮೆಯ ಅನೇಕ ದೇವಾಲಯ, ಜಿನಮಂದಿರಗಳು, ದೈವಸ್ಥಾನಗಳು, ಜೀಣೋದ್ಧಾರಗೊಂಡು ಬ್ರಹ್ಮಕಲಶ, ಪಂಚಕಲ್ಯಾಣ ಪುನರ್ ಪ್ರತಿಷ್ಠಾ ಕಾರ್ಯಕ್ರಮಗಳು ನೇರವೇರಿಸಿದ್ದು ಧಾರ್ಮಿಕ ನೇತೃತ್ವ ವಹಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿ,
ಅಳದಂಗಡಿ ಅಜಿಲ ಸೀಮೆಯ ೨೧ನೇ ಅರಸರಾಗಿ ೧೯೯೫ರಲ್ಲಿ ಅಳದಂಗಡಿ ಅರಮನೆಯಲ್ಲಿ ವಿಧಿವತ್ತಾಗಿ ಡಾ| ಪದ್ಮಪ್ರಸಾದ್ ಅಜಿಲರು ಸೀಮೆಯ ಪ್ರಮುಖರ ಸಮ್ಮುಖದಲ್ಲಿ ಪಟ್ಟಾಬಿಷಿಕ್ತರಾದರು.
ಇಂದು ಬೆಳಿಗ್ಗೆ ಸೋಮನಾಥೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ, ಬರಾಯ ಅರಮನೆಯಲ್ಲಿ ಪ್ರಾರ್ಥನೆ, ಜೈನ ಬಸದಿಯಲ್ಲಿ ವಿಶೇಷ ಪೂಜೆ ನೇರವೇರಿಸಿ ವೈಭವದ ಮರೆರವಣಿಗೆಯಲ್ಲಿ ಅರಸರು ಪಟ್ಟದ ಸಿಂಹಾಸನದಲ್ಲಿ ಆಸೀನರಾದರು. ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ಅಧ್ಯಕ್ಷ ಬೆಳ್ಳೂರು ಕಾವೇಶ್ವರ ದೇವಸ್ಥಾನದ ಧರ್ಮದರ್ಶಿ ರಘು ಎಲ್.ಶೆಟ್ಟಿ,ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ, ಕಾರ್ಯದ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ,ಶಶಿಕಿರಣ್ ಜೈನ್ ಪ್ರಧಾನ ಕಾರ್ಯದರ್ಶಿ ಅಜಿತ್ ಎನ್.ನಾವರ, ಜೊತೆಕಾರ್ಯದರ್ಶಿಮಿತ್ರಸೇನ ಜೈನ್, ಕೋಶಾಧಿಕಾರಿ ಅಶ್ವತ್ ಹೆಗ್ಡೆ ಬಳಂಜ, ಸಂಚಾಲಕ ಶಿವಪ್ರಸಾದ್ ಅಜಿಲ, ಗೌಸಲಹೆಗಾರರು ಶ್ರೀಪಾದ ಪಾಂಗಣ್ಣಾಯ ತಂತ್ರಿ, ಮತ್ತು ಉಪಾಧ್ಯಕ್ಷರುಗಳಾಗಿ ವಜ್ರಕುಮಾರ್ ಉಪ್ಪಿನಂಗಡಿ, ಡಾ| ಪ್ರಶಾಂತ್ ದೇವಾಡಿಗ, ಸುಕೀರ್ತಿ ಅಜ್ರಿ, ಪ್ರಕಾಶ್ ಹೆಗ್ಡೆ, ಸುಬ್ರಹ್ಮಣ್ಯ ಮಯ್ಯ ಅರಸಕಟ್ಟೆ, ಗೋಪಾಲಕೃಷ್ಣ ಶೆಟ್ಟಿ ಉದ್ಯಮಿ ಮುಂಬೈ, ಸೋಮನಾಥ ಬಂಗೇರ ವರ್ಪಾಳೆ, ಎಂ. ಗಂಗಾಧರ ಮಿತ್ತಮಾರು, ಜಗದೀಶ ಹೆಗ್ಡೆ ನಾವರ ಮಂಜುನಾಥ ಭಟ್ ಮಾಲಾಡಿ, ರತ್ನಬುಣ್ಣು, ಪಿ.ಹೆಚ್ ನಿತ್ಯಾನಂದ ಶೆಟ್ಟಿ ನೊಚ್ಚ, ಬೇಬಿ ಪೂಜಾರಿ ಪುಣ್ಕೆತ್ಯಾರು, ಚಂದ್ರಶೇಖರ್ ಅಂತರ, ಪ್ರವೀಣ್ ಕುಮಾರ್ ಇಂದ್ರ, ಪಿಕೆ ರಾಜುಪೂಜಾರಿ,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ ಮುಖಂಡರು, ಊರವರು, ಗುರಿಕಾರರು ಉಪಸ್ಥಿತರಿದ್ದರು.