ಅಳದಂಗಡಿ: ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು 1995ರಿಂದ ಪಟ್ಟಾಭಿಷಕ್ತರಾಗಿ ಇಂದಿನವರೆಗೆ 25ವರ್ಷಗಳಲ್ಲಿ ಸೀಮೆಯ ಅನೇಕ ದೇವಾಲಯ, ಜಿನಮಂದಿರಗಳು, ದೈವಸ್ಥಾನಗಳು, ಜೀಣೋದ್ಧಾರಗೊಂಡು ಬ್ರಹ್ಮಕಲಶ, ಪಂಚಕಲ್ಯಾಣ ಪುನರ್ ಪ್ರತಿಷ್ಠಾ ಕಾರ್ಯಕ್ರಮಗಳು ನೇರವೇರಿಸಿದ್ದು ಧಾರ್ಮಿಕ ನೇತೃತ್ವ ವಹಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ಅಳದಂಗಡಿ ಅಜಿಲ ಸೀಮೆಯ 21ನೇ ಅರಸರಾಗಿ 1995ರಲ್ಲಿ ಅಳದಂಗಡಿ ಅರಮನೆಯಲ್ಲಿ ವಿಧಿವತ್ತಾಗಿ ಡಾ| ಪದ್ಮಪ್ರಸಾದ್ ಅಜಿಲರು ಸೀಮೆಯ ಪ್ರಮುಖರ ಸಮ್ಮುಖದಲ್ಲಿ ಪಟ್ಟಾಬಿಷಿಕ್ತರಾದರು.
ನಾಳೆ ಬೆಳಿಗ್ಗೆಯಿಂದ ವಿವಿಧ ಕ್ಷೇತ್ರದ ಗಣ್ಯರು, ರಾಜಕೀಯ ಮುಖಂಡರು ಆಗಮಿಸಲಿದ್ದು ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು ಅಳದಂಗಡಿ ಅರಮನೆ ನಗರಿ ವಿವಿಧ ಬ್ಯಾನರ್, ಲೈಟಿಂಗ್ಸ್ ಹಾಗೂ ಬಣ್ಣಗಳಿಂದ ಶೃಂಗಾರಗೊಂಡಿದೆ.