ಪಡ್ಡಂದಡ್ಕ: ನೂರಲ್ ಹುದಾ ಜುಮ್ಮಾ ಮಸೀದಿ ಪಡ್ಡಂದಡ್ಕ, ಎಸ್ಕೆಎಸ್ಸೆಸ್ಸೆಫ್ ಪಡ್ಡಂದಡ್ಕ ಶಾಖೆ ಮತ್ತು ಮಂಗಳೂರಿನ ಶ್ರೀನಿವಾಸ ಆಸ್ಪತ್ರೆಯ ಜಂಟಿ ಸಹಭಾಗಿತ್ವದಲ್ಲಿ ಉಚಿತ ವೈದ್ಯಕೀಯ ಶಿಬಿರ ಪಡ್ಡಂದಡ್ಕ ನೂರುಲ್ ಹುದಾ ಮಸೀದಿ ಮದರಸದ ಸಭಾಂಗಣದಲ್ಲಿ ನ.29 ರಂದು ಜರುಗಿತು.
ಶ್ರೀನಿವಾಸ್ ಆಸ್ಪತ್ರೆಯ ಹೃದಯ ಶಸ್ತ್ರ ಚಿಕಿತ್ಸಾ ವಿಭಾಗದ ವೈದ್ಯ ಅಮಿತ್ ಕಿರಣ್ ಮಾತನಾಡಿ, ಶ್ರೀನಿವಾಸ್ ಹಾಸ್ಪಿಟಲ್ ಸರಕಾರದ ಸೌಲಭ್ಯಗಳನ್ನು ಸದುಪಯೋಗಿಸಿ ಅತ್ಯುತ್ತಮ ಸೇವೆಯನ್ನು ನೀಡುತ್ತಾ ಬಂದಿದ್ದು, ಬಿಪಿಎಲ್ ಕಾರ್ಡ್ದಾರರಿಗೆ ಉಚಿತವಾಗಿ ವೈದ್ಯಕೀಯ ಸೇವಾ ಸೌಲಭ್ಯಗಳನ್ನು ನೀಡುತ್ತಿದೆ. ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದರು.
ಡಾ| ಸುನೀಲ್ ಪೈ, ಪಡ್ಡಂದಡ್ಕ ಮಸೀದಿ ಮಾಜಿ ಅಧ್ಯಕ್ಷ ಬಿ.ಮೊಹಮ್ಮದ್, ಶರೀಫ್ ಫೈಝಿ, ಸಿದ್ದೀಕ್ ಫೈಝಿ, ಮಯ್ಯೆದ್ದಿ ಕಿರೋಡಿ ಉಪಸ್ಥಿತರಿದ್ದರು. ವಿಖಾಯ ಕಾರ್ಯದರ್ಶಿ ಇರ್ಪಾನ್ ಪೆರಿಂಜೆ ತಂಡ, ರಿಜ್ವಾನ್ ಯು.ಕೆ, ಎಸ್ಕೆಎಸ್ಸೆಸ್ಸೆಫ್ ಪಡ್ಡಂದಡ್ಕ ಶಾಖಾ ಅಧ್ಯಕ್ಷ ಬಶೀರ್ ಗಾಂಧಿನಗರ, ಕ್ಲಸ್ಟರ್ ಅಧ್ಯಕ್ಷ ಎಸ್ ಕೆ ರಝಾಕ್, ಕೆ.ಪಿ ಬಶೀರ್ ಸಹಕರಿಸಿದರು.
ಮಸೀದಿ ಖತೀಬ್ ಉಸ್ತಾದ್ ಬಹುಮಾನ್ಯ ಅಲ್ಹಾಜ್ ಇಸ್ಹಾಕ್ ಫೈಝಿ ಪ್ರಾರ್ಥಿಸಿದರು. ಮಸೀದಿ ಕಾರ್ಯದರ್ಶಿ ಮಹಮ್ಮದ್ ಶಾಫಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.